ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾರ್ಕಳ : ನಿಧಿ ಯು ಆಚಾರ್‌ - ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Posted On: 06-01-2023 11:28PM

ಕಾರ್ಕಳ : ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಡಿಸೆಂಬರ್ 26ರಿಂದ 28ರವರೆಗೆ ನಡೆದ ಇಂಡಿಯಾ ಸ್ಕೂಲ್‌ ಗೇಮ್ಸ್‌ ಸ್ಪೋರ್ಟ್ಸ್‌ ಫೌಂಡೇಶನ್‌ ನ (S. G. S. D. F India) ವತಿಯಿಂದ ನಡೆಸಲಾದ ಮೂರನೇ ಅಂತರಾಷ್ಟ್ರೀಯ 19 ವರ್ಷದೊಳಗಿನ ಯೋಗ ಚಾಂಪಿಯನ್‌ ಶಿಪ್ ನಲ್ಲಿ ಕಾರ್ಕಳ ಕ್ರಿಯೇಟಿವ್‌ ಕಾಲೇಜಿನ ಪದವಿ ಪೂರ್ವ ವಿದ್ಯಾರ್ಥಿನಿ ನಿಧಿ ಯು ಆಚಾರ್‌ ಭಾರತವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ಗಳಿಸಿರುತ್ತಾರೆ.

ನಿಧಿ ಯು ಆಚಾರ್‌ ಬಾಲ್ಯದಿಂದಲೂ ಅನೇಕ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಪ್ರತಿಭೆಯಾಗಿದ್ದಾರೆ. ಕುಮಾರಿ ನಿಧಿ ಕಾರ್ಕಳದ ಉದಯ ಆಚಾರ್‌ ಮತ್ತು ಲತಾರವರ ಪುತ್ರಿ.

ವಿದ್ಯಾರ್ಥಿನಿಯ ಈ ಸಾಧನೆಗೆ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

ಈಕೆ ಅಂತರಾಷ್ಟ್ರೀಯ ಯೋಗಗುರು ನರೇಂದ್ರ ಕಾವಿದ್ಯಾರ್ಥಿನಿಯ ಈ ಸಾಧನೆಗೆ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ. ಮತ್‌ ರವರಲ್ಲಿ ಯೋಗಭ್ಯಾಸ ತರಬೇತಿಯನ್ನು ಪಡೆಯುತ್ತಿದ್ದಾರೆ.