ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ : ತುಳುಕೂಟ ಉಡುಪಿ - ತುಳು ಭಾವಗೀತೆ ಗಾಯನ

Posted On: 08-01-2023 12:11PM

ಉಡುಪಿ : ತುಳುಕೂಟ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರ ಸಹಯೋಗದಲ್ಲಿ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಗಾಯನ ಭಾನುವಾರ ಉಡುಪಿ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎಸ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಯಾವುದೇ ಕಾರ್ಯ ಮಾಡುವಾಗ ಹೃದಯವಂತಿಕೆಯಿಂದ ಮಾಡಿದಾಗ ಮಾತ್ರ ಜನರಿಗೆ ತಲುಪಲು ಸಾಧ್ಯ. ಬಂದು ಹೋದ ಅಧಿಕಾರಿಯಾಗದೆ ಜನರಿಗಾಗಿ ದುಡಿಯಬೇಕೆಂದಿದ್ದೇನೆ. ಉಡುಪಿ ಮಂಗಳೂರಿನಲ್ಲಿ ಪ್ರೀತಿ, ವಿಶ್ವಾಸ, ಶಿಸ್ತು ಕಾಣಬಹುದು. ಇಲ್ಲಿನ ತುಳು ಭಾಷೆ ನನಗೂ ಕಲಿಯಬೇಕು. ಮುಂದಿನ ದಿನದಲ್ಲಿ ಖಂಡಿತವಾಗಿಯೂ ಕಲಿಯುತ್ತೇನೆ. ತುಳು ಭಾವಗೀತೆ ಗಾಯನದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಶುಭಾಶಯಗಳು ಎಂದರು.

ತುಳು ಕೂಟದ ವತಿಯಿಂದ ಅಪರ ಜಿಲ್ಲಾಧಿಕಾರಿಯವರನ್ನು ಸಮ್ಮಾನಿಸಲಾಯಿತು. ಅತಿಥಿಗಳಾಗಿ ಉಡುಪಿಯ ಚಾರ್ಟರ್ಡ್ ಅಕೌಂಟೆಂಟ್ ಸಿ ಎ ಜೀವನ್ ಕುಮಾರ್, ದುಬೈಯ ಕ್ರಿಯಾತ್ಮಕ ನಿರ್ದೇಶಕರಾದ ಬಿ. ಕೆ. ಗಣೇಶ್ ರೈ, ಮಲ್ಪೆಯ ಯುವ ಉದ್ಯಮಿ ಹರೀಶ್ ಶ್ರೀಯಾನ್, ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ.) ಉಡುಪಿಯ ಅಧ್ಯಕ್ಷರಾದ ರಾಮ್ ವಿ ಕುಂದರ್, ಮಾಡೆಲಿಂಗ್ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತರಾದ ವಿದ್ಯಾ ಸರಸ್ವತಿ, ಪ್ರೈಮ್ ಟಿವಿ ನಿರ್ದೇಶಕರಾದ ರೂಪೇಶ್ ವಿ.ಕಲ್ಮಾಡಿ, ಗಂಗಾಧರ ಕಿದಿಯೂರು ಉಪಸ್ಥಿತರಿದ್ದರು.

ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ತುಳು ಭಾವಗೀತೆ ಗಾಯನ ಜರಗಿತು. ತೀರ್ಫುಗಾರರಾಗಿ ಜಯಶ್ರೀ ಕೋಟ್ಯಾನ್, ಭಾರತಿ, ರವಿಶಂಕರ್ ಸಹಕರಿಸಿದರು. ತುಳುಕೂಟ ಉಡುಪಿಯ ಅಧ್ಯಕರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಸಂಗೀತ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕ ಪ್ರಕಾಶ್ ಸುವರ್ಣ ವಂದಿಸಿದರು.