ಬಂಟಕಲ್ಲು : ಗುರುಮೆಚ್ಚುವ ಶಿಷ್ಯರಾಗಿ ಬೆಳೆಯಬೇಕು - ಶಂಕರ್ ನಾಯಕ್
Posted On:
08-01-2023 06:14PM
ಬಂಟಕಲ್ಲು : ಶ್ರೀ ಅಯ್ಯಪ್ಪ ಭಕ್ತ ವೃಂದ ಇದರ ಆಶ್ರಯದಲ್ಲಿ ಶ್ರೀ ಸ್ವಾಮಿ ಚಂಡೆ ಬಳಗವನ್ನು ಬಂಟಕಲ್ಲು ಶ್ರೀ ಸಾರ್ವಜನಿಕ ಗಣೇಶೋತ್ಸವ ವೇದಿಕೆಯ ಗೌರವಾಧ್ಯಕ್ಷ ಶಂಕರ್ ನಾಯಕ್
ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಗುರು ಮೆಚ್ಚುವ ಶಿಷ್ಯರಾಗಿ ಬೆಳೆಯಬೇಕೆಂದು ಅಭಿಪ್ರಾಯಪಟ್ಟರು.
ಬಳಗದ ಅಧ್ಯಕ್ಷರಾದ ಮಾಧವ ಕಾಮತ್ ರವರು ಗುರುಗಳಾದ ನಿತಿನ್ ಕಟಪಾಡಿಯವರಿಗೆ ಶಿಷ್ಯ ವೃಂದದ ಪರವಾಗಿ ಗುರುಕಾಣಿಕೆ ಸಮರ್ಪಿಸಿದರು.
ಶಿಬಿರದ ಮಂಜುನಾಥ್ ಗುರುಸ್ವಾಮಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂಡೆ ಬಳಗದ ಸದಸ್ಯರು ಪ್ರಾರ್ಥಿಸಿದರು. ಹೇರೂರು ಮಾಧವಾಚಾರ್ಯರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.