ಕಾಪು : ನೂತನವಾಗಿ ಪ್ರಾರಂಭಗೊಂಡ ಕಳತ್ತೂರು ಚಂದ್ರನಗರದಲ್ಲಿರುವ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ನ ಮಾಹಿತಿ ಕರಪತ್ರವನ್ನು ಮಲ್ಲಾರು-ಮಜೂರು ಬದ್ರಿಯಾ ಜುಮ್ಮಾ ಮಸ್ಜಿದ್ ಧರ್ಮಗುರುಗಳಾದ ಅಬ್ದುರ್ರಶೀದ್ ಸಖಾಫಿ ಅಲ್-ಖಾಮಿಲ್ ರವರು ಕಾಪುವಿನ ಸಮಾಜ ಸೇವಕ ಲೀಲಾದರ ಕೆ ಶೆಟ್ಟಿಯವರ ನಿವಾಸದಲ್ಲಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಲೀಲಾದರ ಶೆಟ್ಟಿಯವರು ಮಾತನಾಡಿ ಫಾರೂಕ್ ಚಂದ್ರನಗರರವರು ಉತ್ತಮ ಸಮಾಜ ಸೇವಕರಾಗಿದ್ದು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವದಿಂದ ಕಾಣುವ ಹಸನ್ಮುಖಿ ವ್ಯಕ್ತಿಯಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಬಟರ್ ಫ್ಲೈ ಎಂಬ ಹೆಸರಿನಲ್ಲಿ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಪ್ರಾರಂಭ ಮಾಡಿದ್ದು ಹಣದ ಆಸೆಯನ್ನು ಬಿಟ್ಟು ಸಮಾಜ ಸೇವೆ ಮಾಡುವ ಮೂಲಕ ಸಾಮಾನ್ಯ ಜನರಿಗೂ ಕೂಡ ಸಮಾಧಾನಕರ ರೀತಿಯ ದರದಲ್ಲಿ ಸಿಗಲಿ ಎಂಬ ಉದ್ದೇಶದಿಂದ ಮಾಡಿರುತ್ತಾರೆ ನೂತನವಾಗಿ ಪ್ರಾರಂಭಿಸಿದ ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜನಸಂಪರ್ಕ ಜನಸೇವಾ ವೇದಿಕೆ ಕಾಪು ಇದರ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಉಳಿಯಾರು ಇದರ ಅಧ್ಯಕ್ಷರಾದ ನಾಗಭೂಷಣ್ ರಾವ್ , ರವಿ ಉಪಾಧ್ಯಾಯ ಕರಂದಾಡಿ, ಪ್ರಭಾತ್ ಮೂಳೂರು, ಶಂಶುದ್ಧಿನ್ ಇಸ್ಮಾಯಿಲ್ ಕರಂದಾಡಿ, ರವೀಂದ್ರ ಮಲ್ಲಾರು ಉಪಸ್ಥಿತರಿದ್ದರು.
ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಇದರ ಆಡಳಿತ ನಿರ್ದೇಶಕರಾದ ಫಾರೂಕ್ ಚಂದ್ರನಗರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.