ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಅಡ್ವೆ-ನಂದಿಕೂರು ಕಂಬಳ - ಕಂಬಳ‌ ನೋಡಬೇಕೆನ್ನುವ ಹಂಬಲವಿತ್ತು, ನೋಡಿ ಧನ್ಯನಾದೆ : ಪ್ರಮೋದ್ ಮುತಾಲಿಕ್

Posted On: 15-01-2023 11:44PM

ಪಡುಬಿದ್ರಿ : ಕಂಬಳದ ಬಗ್ಗೆ ಆಸಕ್ತಿ ಇತ್ತು. ನೋಡಬೇಕೆನ್ನುವ ಹಂಬಲವೂ ಇತ್ತು. ಅದು ಇಂದು ಅಡ್ವೆ- ನಂದಿಕೂರು ಕಂಬಳದಲ್ಲಿ ಈಡೇರಿದೆ. ಮೊದಲನೆಯ ಬಾರಿ ಕಂಬಳ ನೋಡಿ ಧನ್ಯನಾದೆ. ಜಾತಿ,ಮತ, ಶ್ರೀಮಂತ, ಬಡವನೆಂಬ ಬೇಧವಿಲ್ಲದೆ, ಎಲ್ಲರ ಕ್ರೀಡೆ ಎನ್ನಬಹುದು. ರೈತವರ್ಗಕ್ಕೆ ಪ್ರೋತ್ಸಾಹ, ಆನಂದ ಕೊಡುವ ಕ್ರೀಡೆ. ಗ್ರಾಮೀಣ ಭಾಗದ ಕಂಬಳವು ದೇಶದಲ್ಲಿ ಆಕರ್ಷಕವಾದಂತಹ ಕ್ರೀಡೆ. ತುಳು ಭಾಷೆ ಗ್ರಾಮೀಣ ಭಾಷೆ, ಶ್ರೇಷ್ಠ ಭಾಷೆ, ಪುರಾತನ ಭಾಷೆ ಸರಕಾರ ಮಾನ್ಯತೆ ನೀಡಬೇಕೆಂದು ಸರಕಾರಕ್ಕೆ ಆಗ್ರಹಿಸುತ್ತೇನೆ. ಈ ಭಾಗದಲ್ಲಿ ಧಾರ್ಮಿಕತೆಗೆ ಒತ್ತು ನೀಡುತ್ತಾ ಭಜನಾ ಸಂಸ್ಕೃತಿಗೂ ಕೂಡ ಮಹತ್ವ ನೀಡಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ಆದಿತ್ಯವಾರ ಪಡುಬಿದ್ರಿ ಸಮೀಪದ ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ 30ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಿರಂತರ 30 ವರ್ಷಗಳಿಂದ ಕಂಬಳ ಆಯೋಜಿಸಿದ ಸಂಘಟಕರಿಗೆ ಮತ್ತು ಭಾಗವಹಿಸಿದ ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು.

ಈ ಸಂದರ್ಭ ಗಣ್ಯರು, ಕಂಬಳಾಭಿಮಾನಿಗಳು ಉಪಸ್ಥಿತರಿದ್ದರು.