ಶಬ್ಬೀರ್ ಎಸ್ ಅಭಿಮಾನಿ ಬಳಗದಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರಿಗೆ ಅಭಿನಂದನೆ
Posted On:
17-01-2023 12:41PM
ಕಾಪು : ಶಬ್ಬೀರ್ ಎಸ್ ಅಭಿಮಾನಿ ಬಳಗ ಮಂಗಳೂರು ವತಿಯಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರ ರವರನ್ನು ಬಟರ್ ಫ್ಲೈ ಗೆಸ್ಟ್ ಹೌಸ್ ನಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿ.ಕೆ.ಡಿ.ಸಿ.ಸಿ ಪ್ರದಾನ ಕಾರ್ಯದರ್ಶಿ ಶಬ್ಬೀರ್ ಸಿದ್ದಕಟ್ಟೆ ಮಾತನಾಡಿ ಫಾರೂಕ್ ಚಂದ್ರನಗರ ಉಡುಪಿ ಜಿಲ್ಲೆಯ ಹತ್ತಾರು ಗ್ರಾಮದಲ್ಲಿ ಉತ್ತಮ ಸಮಾಜ ಸೇವೆ ಸಲ್ಲಿಸಿದ್ದಾರೆ ಅದಕ್ಕಾಗಿ ಅವರಿಗೆ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಆ ನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಕೂಡ ಅವರ ಪಾಲಿಗೆ ಬಂದಿರುತ್ತದೆ. ಇನ್ನು ಮುಂದೆಯೂ ದೇವರು ಅವರಿಗೆ ಇನ್ನಷ್ಟು ಶಕ್ತಿ ಕೊಟ್ಟು ಬಡವರ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೂಡುಬಿದ್ರೆ ಅಳ್ವಾಸ್ ಪಿ.ಯು ಕಾಲೇಜು ಪ್ರಾಂಶುಪಾಲರಾದ ಮೊಹಮ್ಮದ್ ಸದಕತ್, ಮಾಜಿ ವಿಲೇಜ್ ಅಕೌಂಟೆಂಟ್ ಸುಲೈಮಾನ್ ಬಜಗೋಳಿ, ಉದ್ಯಮಿ ಶಬ್ಬೀರ್ ಅಲ್ತಾಫ್, ಮಾಜಿ ವಿ.ಎಸ್.ಎಸ್.ಎನ್ ಬ್ಯಾಂಕ್ ಮೆನೇಜರ್ ಮೊಹಮ್ಮದ್ ವೇಣೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.