ಮೂಲ್ಯರ ಯಾನೆ ಕುಲಾಲರ ಸಂಘ ಕುತ್ಯಾರು : ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ
Posted On:
17-01-2023 01:53PM
ಕಾಪು : ತಾಲೂಕಿನ ಕುತ್ಯಾರುವಿನ ಮೂಲ್ಯರ ಯಾನೆ ಕುಲಾಲ ಸಂಘ (ರಿ) ಕುತ್ಯಾರು ಇವರ ಆಶ್ರಯದಲ್ಲಿ ಸಂಘದ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಸತೀಶ್ ಕುತ್ಯಾರು ಅಧ್ಯಕ್ಷತೆಯಲ್ಲಿ ಕುತ್ಯಾರು ರಾಮೊಟ್ಟು ಬನತೋಡಿ ಗದ್ದೆಯಲ್ಲಿ ಜನವರಿ 15 ರಂದು ನಡೆಯಿತು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆರ್ಡೂರಿನ ಐತು ಕುಲಾಲ್ ಹಾಗೂ ಕುತ್ಯಾರು ಅಂಚೆ ಕಚೇರಿಯಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ ಇನ್ನದ ಸತೀಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಂಗಳೂರಿನ ವೈದ್ಯರಾದ ಶ್ರೀನಿವಾಸ್ ಮಂಗಳೂರು, ಆಗಮ ಪಂಡಿತ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಉದ್ಯಮಿ ಸಮಾಜ ಸೇವಕರು ಗುರ್ಮೆ ಸುರೇಶ್ ಶೆಟ್ಟಿ, ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇದರ ನಿಕಟ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್ ಕುಲಾಲ್ ಉಪಸ್ಥಿತರಿದ್ದರು.
ರಾಜಲಕ್ಷ್ಮಿ ಸತೀಶ್ ಎಲ್ಲರನ್ನು ಸ್ವಾಗತಿಸಿದರು. ಧೀರಜ್ ಕುಲಾಲ್ ಕುತ್ಯಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.