ಕಾಪು : ಮುಳೂರು ಯುವ ಗೆಳೆಯರ ಬಳಗದ 33ನೇ ವಾರ್ಷಿಕೋತ್ಸವ ಬುಧವಾರ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕಳೆದ 33 ವರ್ಷಗಳಿಂದ ನಿರಂತರ ಸಮಾಜ ಸೇವೆ ಮಾಡುತ್ತಿರುವ ಯುವ ಗೆಳೆಯರ ಬಳಗದ ಸದಸ್ಯರು ಅಭಿನಂದನೆಗೆ ಅರ್ಹರು ಎಂದರು.
ಈ ಪರಿಸರದಲ್ಲಿ ಕಡಲ್ಕೊರೆತಕ್ಕಾಗಿ ಕಲ್ಲು ದಂಡೆ ನಿರ್ಮಿಸಲು ಸಹಕರಿಸಿದ ಕಾಪು ಶಾಸಕ ಲಾಲಾಜಿ ಮೆಂಡನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ, ಸಹಕಾರ ರತ್ನ ಪ್ರಶಸ್ತಿ ಪಡೆದ ಯಶ್ ಪಾಲ್ ಸುವರ್ಣ, ಕಲಾಸಂಗಮದ ಮುಖ್ಯಸ್ಥ ವಿಜಯಕುಮಾರ್ ಕೊಡಿಯಲ್ ಬೈಲುರವರನ್ನು ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು.
ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಗುರ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಸಮಾಜ ರತ್ನ ಯಶ್ ಪಾಲ್ ಸುವರ್ಣ, ಸಾಯಿ ರಾಧಾ ಸಂಸ್ಥೆಯ ಮುಖ್ಯಸ್ಥ ಮನೋಹರ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ ಬಾಲಾಜಿ , ಸಂಸ್ಥೆಯ ಅಧ್ಯಕ್ಷ ಮಧು ಆರ್ ಕೋಟ್ಯಾನ್, ವಿನೋದ್ ಸುವರ್ಣ, ಶಾಂಭವಿ ಕುಲಾಲ್, ಕುಶ ಸುವರ್ಣ, ಕಿಶೋರ್ ಕರ್ಕೆರಾ, ವೀರ ಕೇಸರಿ ಜೆ ಶೆಟ್ಟಿ, , ನವೀನ್ ಡಿ ಪುತ್ರನ್, ಸಚಿನ್ ಕೋಟ್ಯಾನ್, ದೇವರಾಜ್ ಎಸ್ ಕರ್ಕೆರಾ ಉಪಸ್ಥಿತರಿದ್ದರು.
ಮಧು ಕೋಟ್ಯಾನ್ ಪ್ರಾರ್ಥಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು. ಸುನಿಲ್ ಕೋಟ್ಯಾನ್ ವಂದಿಸಿದರು.