ಶಿರ್ವ : ಶಿರ್ವದ ಅಪಘಾತ ವಲಯವೆಂದು ಪರಿಗಣಿಸಲ್ಪಟ್ಟ ರಾಬಿನ್ ಬಸ್ ಸ್ಟ್ಯಾಂಡ್ ರಸ್ತೆ ಬದಿಯ ತಿರುಗು ರಸ್ತೆ ಬಳಿ ಇರುವ ಗಿಡಗಂಟಿಗಳನ್ನು ಶಿರ್ವ ಸಿ. ಎ. ಬ್ಯಾಂಕ್ ಕಾರ್ಯದರ್ಶಿ ರವೀಂದ್ರ ಆಚಾರ್ಯ, ಬಂಟಕಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆ ಅಧ್ಯಕ್ಷ ಮಾಧವ ಕಾಮತ್, ಲl ರವೀಂದ್ರ ಆಚಾರ್ಯ ಬಂಟಕಲ್ ಇವರ ಸಹಕಾರದಿಂದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತನ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ತೆರವುಗೊಳಿಸಲಾಯಿತು.
ಸರಕಾರ ಪಂಜಿಮಾರು ಪಾಲ್ಕೆಯಿಂದ ಸಿದ್ದಿ ವಿನಾಯಕ ದೇವಸ್ಥಾನದವರೆಗಿನ ರಸ್ತೆಯನ್ನು ದ್ವೀಪದಗೊಳಿಸದೆ ಕೆಲವಾರು ಅಪಘಾತ ಈ ವಲಯದಲ್ಲಿ ಸಂಭವಿಸಿ ಪ್ರಾಣಹಾನಿ ಉಂಟಾಗಿದೆ. ಸಾರ್ವಜನಿಕರು, ಗ್ರಾಮ ಪಂಚಾಯತ್ ಮನವಿ ಮಾಡಿದರು ಸರಕಾರ ಸ್ಪಂದನೆ ಮಾಡಲಿಲ್ಲ ಎಂದು ರತನ್ ಶೆಟ್ಟಿ ಅಭಿಪ್ರಾಯಪಟ್ಟು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.