ಜನವರಿ 22 : ಯಂಗ್ ಫ್ರೆಂಡ್ಸ್ ಪಡುಬಿದ್ರಿ - ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಕೋಸ್ಟಲ್ ಸ್ಮ್ಯಾಷರ್ಸ್ ಟ್ರೋಫಿ 2023
Posted On:
20-01-2023 10:57PM
ಪಡುಬಿದ್ರಿ : ಇಲ್ಲಿನ ಯಂಗ್ ಫ್ರೆಂಡ್ಸ್ ಪಡುಬಿದ್ರಿ ವತಿಯಿಂದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಕೋಸ್ಟಲ್ ಸ್ಮ್ಯಾಷರ್ಸ್ ಟ್ರೋಫಿ 2023 ಇದರ ಉದ್ಘಾಟನಾ ಸಮಾರಂಭ ಜನವರಿ 22, ಆದಿತ್ಯವಾರ ಬೆಳಿಗ್ಗೆ 9:30 ಕ್ಕೆ ಹಳೆಯಂಗಡಿಯ ಟೋರ್ಪೆಡೋಸ್ ಸ್ಫೋಟ್ಸ್೯ ಕ್ಲಬ್ನ ಒಳಾಂಗಣ ಶಟಲ್ ಕೋಟ್೯ ನಲ್ಲಿ ಜರಗಲಿದೆ.
ಸ್ಮ್ಯಾಷಸ್೯ ವೆಲ್ಫೇರ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಅಧ್ಯಕ್ಷ ರಮೀಝ್ ಹುಸೇನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದ್ದು,
ಪಂದ್ಯಾಟವನ್ನು ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ನ ಅಧ್ಯಕ್ಷರಾದ ವೈ ಸುಕುಮಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಕೋರ್ಡಿನೇಟರ್ ನವೀನ್ಚಂದ್ರ ಜೆ ಶೆಟ್ಟಿ, ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ ಸುಧೀರ್ ಕುಮಾರ್, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಎನ್ ಶೆಟ್ಟಿ, ಮ್ಯಾಂಗಳೋರ್ ಪ್ರಾಪರ್ಟೀಸ್ ಮ್ಯಾನೇಜಿಂಗ್ ಡೈರೆಕ್ಟರ್ ರೋಜರ್ ಎಮ್ ಪಿಂಟೊ, ಕೋಸ್ಟಲ್ ಫರ್ನಿಚರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಹನಿಫ್ ಕೋಸ್ಟಲ್, ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಗೌರವ ಅಧ್ಯಕ್ಷ ಶರತ್ ಶೆಟ್ಟಿ, ದೇವಿ ಜುವೆಲರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಸನ್ನ ಎಸ್ ಎಸ್, ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷ ಸುರೇಶ್ ಎರ್ಮಾಳು,
ಸ್ಮ್ಯಾಷಸ್೯ ವೆಲ್ಫೇರ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಗೌರವ ಅಧ್ಯಕ್ಷ ಕೌಸರ್ ಭಾಗವಹಿಸಲಿದ್ದಾರೆ.
ಪಂದ್ಯಾಟದಲ್ಲಿ ಒಟ್ಟು 10 ತಂಡಗಳು, 80 ಆಟಗಾರರಿದ್ದು, ವಿನ್ನಸ್೯ಗೆ ರೂ.20,000 ನಗದು, ಟ್ರೋಫಿ, ರನ್ನಸ್೯ಗೆ ರೂ. 13,0000 ನಗದು, ಟ್ರೋಫಿ ದೊರೆಯಲಿದೆ.
ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ನೌಶೀರ್ ಮಾಲೀಕತ್ವದ ಕೋಸ್ಟಲ್ ಹಿರೋಸ್, ನಿತೇಶ್ ರವರ ಎರ್ಮಾಳು ಗುರು ಫ್ರೆಂಡ್ಸ್, ನಸ್ರುಲ್ಲರವರ ಟೀಮ್ ಸಿಗ್ನೇಚರ್, ಕಾರ್ತಿಕ್ ರವರ ದುರ್ಗಾ ಫ್ರೆಂಡ್ಸ್ ಎರ್ಮಾಳು, ಶಂಕರ್ ಕಂಚಿನಡ್ಕ ಇವರ ಯಶ್ ವಾರಿಯಸ್೯, ಕೃಷ್ಣ ಬಂಗೇರ ಇವರ ಯನ್ಶ್ ರಿಯಲ್ ಫೈಟಸ್೯, ಅನ್ವರ್ ಅಹ್ಮದ್ ರವರ ಕ್ಲಬ್ ಡಿ ಎನ್ಫಿಗೊ, ಪ್ರಶಾಂತ್ ರವರ ಎಸ್ ಎನ್ ಜಿ ಎರ್ಮಾಳು, ತರುಣ್ ಶೆಟ್ಟಿ ಇವರ ಟಿಯಾನ್ ಶೆಟ್ಟಿ ಫ್ರೆಂಡ್ಸ್, ರಾಝಿ ಮಾಲೀಕತ್ವದ ರೈಸಿಂಗ್ ಸ್ಟಾರ್ ಪಡುಬಿದ್ರಿ ತಂಡಗಳು ಭಾಗವಹಿಸಲಿವೆ ಎಂದು ಪಂದ್ಯಾಟದ ಸಂಘಟಕರಾದ ಮಿನ್ನಾ ಷರೀಫ್, ಪ್ರವೀಣ್ ಎರ್ಮಾಳು, ಇಮ್ರಾನ್ ಪಡುಬಿದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.