ಕಾಪು : ರಾಷ್ಟೀಯ ಮತದಾರರ ದಿನಾಚರಣೆ - ಪ್ರತಿಜ್ಞಾ ವಿಧಿ ; ಸನ್ಮಾನ
Posted On:
25-01-2023 10:52PM
ಕಾಪು : ರಾಷ್ಟೀಯ ಮತದಾರರ ದಿನಾಚರಣೆ 2023 ಅಂಗವಾಗಿ ಕಾಪು ತಾಲೂಕು ಮಟ್ಟದ ಕಾರ್ಯಕ್ರಮವನ್ನು ಕಾಪುವಿನ ತಹಶೀಲ್ದಾರ್ ನೇತ್ರತ್ವದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು ಇಲ್ಲಿ ನಡೆಸಲಾಯಿತು.
ಮತದಾನದ ಮಹತ್ವವನ್ನು ತಿಳಿಸಿ, ಪ್ರತಿಜ್ಞಾ ವಿಧಿಯನ್ನು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ವಿದ್ಯಾರ್ಥಿಗಳಿಗೆ ಬೋಧಿಸಿದರು.
ಪ್ರಾಂಶುಪಾಲರಾದ ಸ್ಟೀವನ್ ಕ್ವಾಡ್ರಸ್ ಯುವ ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಿದರು.
ಸನ್ಮಾನ : ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿ.ಎಲ್.ಓ ಮೇಲ್ವಿಚಾರಕರಾದ ಮಥಾಯಿ ಪಿ ಎಮ್, ಡೋಮಿನಿಕ್ ಡೇನಿಯಲ್ ಡಿಸೋಜಾ, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಬಿ.ಎಲ್.ಓಗಳಾದ ಜೆಸುದಾಸ್ ಸೋನ್ಸ್ ಹಾಗೂ ಪೂರ್ಣಿಮಾ ಇವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭ ತಹಶೀಲ್ದಾರ್ ಕಛೇರಿ ಸಿಬ್ಬಂದಿ, ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.