ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಿರಂತರ್ ಉದ್ಯಾವರ : ಜ.30 - ಫೆ. 5 ರವರೆಗೆ ಏಳು ದಿನದ ಬಹುಭಾಷಾ ನಾಟಕೋತ್ಸವ

Posted On: 28-01-2023 02:25PM

ಉಡುಪಿ : ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿರುವ ನಿರಂತರ್ ಉದ್ಯಾವರ ಐದನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಜನವರಿ 30 ರಿಂದ ಫೆಬ್ರವರಿ 5 ರವರೆಗೆ ಸಂಪೂರ್ಣ ಉಚಿತ ಪ್ರವೇಶದ ನಿರಂತರ ಏಳು ದಿನದ ಬಹುಭಾಷಾ ನಾಟಕೋತ್ಸವ ಉದ್ಯಾವರದಲ್ಲಿ ಹಮ್ಮಿಕೊಳ್ಳಲಾಗಿದೆ.

2018ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಸಂಸ್ಥೆ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ನಾಟಕ ಮತ್ತು ಕವಿಗೋಷ್ಠಿ, ಚಲನಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ಉದ್ಯಾವರ ಸಂತ ಫ್ರಾನ್ಸಿಸ್ ಜೀವಿಯರ್ ದೇವಾಲಯದ ವಠಾರದಲ್ಲಿರುವ ಐಸಿಐಎಂ ಉದ್ಯಾವರ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ ನಾಟಕೋತ್ಸವ ಪ್ರದರ್ಶನವಾಗಲಿದೆ. ಐದನೇ ವರ್ಷದ ಪ್ರಯುಕ್ತ ಜನವರಿ 30ರಂದು ಸಂತೋಷ್ ನಾಯಕ್ ಪಟ್ಲ ಇವರ ನಿರ್ದೇಶನದ ಮತ್ತು ನಾಗೇಶ್ ಕುಮಾರ್ ಉದ್ಯಾವರ ಇವರು ತುಳು ಅನುವಾದ ಮಾಡಿದ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ "ಹೇ ರಾಮ್" ತುಳು ನಾಟಕ, ಜನವರಿ 31ರಂದು ವಾಲ್ಸ್ಟನ್ ಡೇಸ ರಚನೆಯ, ಗಣೇಶ್ ರಾವ್ ಎಲ್ಲೂರು ನಿರ್ದೇಶನದ ಕಲಾರಾಧನ ಸಂಸ್ಥೆ ಶಂಕರ್ ಪುರ ಇವರಿಂದ "ಕಾಮಿಲ್ ಕಲ್ವಾರ್" ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ ಒಂದರಂದು ಲಿಟಲ್ ಅರ್ಥ ಸ್ಕೂಲ್ ಆಫ್ ಥಿಯೇಟರ್ ಕೇರಳ ಇವರಿಂದ ಮಲಯಾಳ ನಾಟಕ "ಬೊಲಿವಿಯನ್ ಸ್ಟಾರ್ಸ್", ಫೆಬ್ರವರಿ ಎರಡರಂದು ಅಸ್ತಿತ್ವ ಹಾಗೂ ರಂಗ ಅಧ್ಯಯನ ಕೇಂದ್ರ ಸಂತ ಅಲೋಸಿಸ್ ಕಾಲೇಜ್ ಮಂಗಳೂರು ಇವರಿಂದ ಕನ್ನಡ ನಾಟಕ "ಜನಶತ್ರು" ಪ್ರದರ್ಶನವಾಗಲಿದೆ. ಫೆಬ್ರವರಿ ಮೂರರಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋವಿಷಸ್ ಕಾಲೇಜು ಮಂಗಳೂರು ಇವರಿಂದ ಇಂಗ್ಲೀಷ್ ನಾಟಕ "Can't Pay, Won't Pay", ಫೆಬ್ರವರಿ ನಾಲ್ಕರಂದು ಅಸ್ತಿತ್ವ ಮಂಗಳೂರು ಇವರಿಂದ ಕೊಂಕಣಿ ನಾಟಕ "ಅದಾಂವ್ ಅನಿ ಏವೆನ್ ಉಘಡ್ಲೆ ದೊಳೆ, ರಚ್ನಾರ ಅತಾಂ ತುಂಚ್ ಪಳೆ" ಮತ್ತು ಅಸ್ತಿತ್ವ ಮಂಗಳೂರು ಇವರಿಂದ ಕೊಂಕಣಿ ನಾಟಕ "ಎಮ್ಮಾವ್ಸ್" ಪ್ರದರ್ಶನವಾಗಲಿದೆ.

ಜನವರಿ 30 ರಂದು ಸಂಜೆ 6 ಗಂಟೆಗೆ ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವಂ. ಸ್ಟ್ಯಾನಿ ಬಿ ಲೋಬೋ ಏಳು ದಿನದ ಬಹುಭಾಷ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕರು, ಮಾಜಿ ಸಚಿವರು, ವಿವಿಧ ಜನಪ್ರತಿನಿಧಿಗಳು, ಕಲಾವಿದರು, ಸಮಾಜದ ವಿವಿಧ ಸಂಘಟನೆಗಳ ಮುಖಂಡರು ವಿವಿಧ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನಿರಂತರ್ ಸಂಘಟನೆಯ ಪ್ರಕಟಣೆ ತಿಳಿಸಿದೆ.