ನಾಟಕದ ಮೂಲಕ ಭಾಷೆಗಳಿಗೆ ಪ್ರಾಧ್ಯಾನತೆ : ರಾಧಾಕೃಷ್ಣ ಶ್ರೀಯಾನ್
Posted On:
01-02-2023 08:22PM
ಉಡುಪಿ : ನಿರಂತರ ಉದ್ಯಾವರ ಸಂಘಟನೆಯ ಮೂಲಕ ಈಗ ನಾಟಕಗಳು ಈ ಭಾಗದಲ್ಲಿ ಪ್ರಖ್ಯಾತಿಯನ್ನು ಪಡೆದಿವೆ. ವಿವಿಧ ಭಾಷೆ ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ವಿವಿಧ ಭಾಷೆಗಳಿಗೆ ಪ್ರಾಧಾನ್ಯತೆ ನೀಡುವ ಕೆಲಸವನ್ನು ನಿರಂತರ್ ಸಂಘಟನೆ ಮಾಡುತ್ತಿದೆ ಎಂದು ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ತಿಳಿಸಿದರು.
ನಿರಂತರ್ ಉದ್ಯಾವರ ಸಂಘಟನೆ ನೇತೃತ್ವದಲ್ಲಿ ಉದ್ಯಾವರದಲ್ಲಿ ನಡೆಯುತ್ತಿರುವ ಏಳು ದಿನದ ಬಹುಭಾಷಾ ನಾಟಕೋತ್ಸವದಲ್ಲಿ ದ್ವಿತೀಯ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಂಸ್ಕೃತಿಕ ಸಂಸ್ಥೆ ಪರಿಚಯ ಮತ್ತು ಕಲಾರಾಧನ್ ಇದರ ಅಧ್ಯಕ್ಷರಾಗಿರುವ ಅನಿಲ್ ಡೆಸಾ ಶಂಕರಪುರ, ಲಯನ್ಸ್ ಕ್ಲಬ್ ಬಂಟಕಲ್ ಬಿ ಸಿ ರೋಡ್ ಇದರ ಅಧ್ಯಕ್ಷ ಲ. ವಿಲ್ಫ್ರೆಡ್ ಪಿಂಟೊ, ರಂಗ ನಿರ್ದೇಶಕ ಗಣೇಶ್ ರಾವ್ ಎಲ್ಲೂರು, ನಾಟಕೋತ್ಸವ ಸಂಚಾಲಕ ರೊನಾಲ್ಡ್ ಡಿಸೋಜಾ, ನಿರಂತರ್ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ತಾ, ಕಾರ್ಯದರ್ಶಿ ಒಲಿವೇರಾ ಮತಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಷನ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ದಿ. ಲುವಿಸ್ ಪಿಂಟೋ ಸ್ಮರಣಾರ್ಥ ಅವರ ಪತ್ನಿ ವೆರೋನಿಕ ಪಿಂಟೊ ಮತ್ತು ಮಕ್ಕಳು ಪಾಂಬೂರು ಇವರು ಪ್ರಾಯೋಜಕತ್ವ ಮಾಡಿದ ಗಣೇಶ್ ರಾವ್ ಎಲ್ಲೂರು ನಿರ್ದೇಶನದ ಶಂಕರಪುರದ ಕಲಾರಾಧನೆ ಸಂಸ್ಥೆಯ ಕೊಂಕಣಿ ನಾಟಕ ಕಾಮಿಲ್ ಕಾಲ್ವಾರ್ ಪ್ರದರ್ಶನಗೊಂಡಿತು. 500ಕ್ಕೂ ಅಧಿಕ ಕಲಾಭಿಮಾನಿಗಳು ನಾಟಕವನ್ನು ವೀಕ್ಷಿಸಿದರು.