ಬೆಳಪು ಗ್ರಾಮ ಪಂಚಾಯತಿ ವತಿಯಿಂದ ದಾರಿ ದೀಪಕ್ಕಾಗಿ ಅಳವಡಿಸಿರುವ ಸೋಲಾರ್ ದೀಪಗಳ ಬ್ಯಾಟರಿ ಕಳ್ಳತನ ಸವಾಲಾಗಿತ್ತು. ಇದನ್ನು ಅರಿತ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿಯವರು ಸ್ಥಳೀಯ ಯುವಕರ ತಂಡ ರಚಿಸಿದ್ದರು. ಅದರಂತೆ ಇಂದು ಮುಂಜಾನೆ ಸ್ಥಳೀಯರಿಗೆ ಕಳವು ಮಾಡುತ್ತಿದ್ದಾತ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ. ಈತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.