ಪಡುಬಿದ್ರಿ : ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಪಲಿಮಾರು ಪಟ್ಟಿಗೇರಿ ನಿವಾಸಿ ಗಣೇಶ್ ಪೂಜಾರಿಯವರ ವೃೆದ್ಯಕೀಯ ಚಿಕಿತ್ಸೆಗಾಗಿ ಕಡಲ್ ಫಿಶ್ ಸ್ಪೋರ್ಟ್ಸ್ & ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಚೇತನ್ ಪಡುಬಿದ್ರಿ, ತುಳುನಾಡ ಕಲಾವಿದರು (ರಿ.) ಪಡುಬಿದ್ರಿ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ರಾಜ್ಯಾಧ್ಯಕ್ಷರಾದ ರಚನ್ ಸಾಲ್ಯಾನ್, ಸ್ಥಳೀಯರಾದ ಗುರುಪ್ರಸಾದ್ ಪೂಜಾರಿ, ಮಹೇಶ್ ಪೂಜಾರಿ, ರಫೀಕ್ ಪಲಿಮಾರು
ಉಪಸ್ಥಿತರಿದ್ದರು.