ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರೋಟರಿ ಶಂಕರಪುರದ 200ನೇ ತಿಂಗಳ ವಿಶೇಷ ಮಾನಸಿಕ ಶಿಬಿರ

Posted On: 31-10-2020 05:28PM

ರೋಟರಿ ಶಂಕರಪುರ ಮತ್ತು ರೋಟರಿ ಟ್ರಸ್ಟ್ನ ಉಚಿತ ಮಾನಸಿಕ ಶಿಬಿರವು 17 ವರ್ಷಗಳಿಂದ ನಡೆಯುತ್ತಾ ಬಂದಿದ್ದು.

01/11/2020 ರ ಆದಿತ್ಯವಾರದಂದು 200 ನೇ ತಿಂಗಳ ಶಿಬಿರಕ್ಕೆ ಕಾಲಿಟ್ಟ ಪ್ರಯುಕ್ತವಾಗಿ ಒಂದು ವಿಶೇಷ ಕಾರ್ಯಕ್ರಮವು ಶಿಬಿರಾರ್ಥಿಗಳ ಜೊತೆಗೆ ನಡೆಯಲಿದೆ, ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೇ ಫಾ.ರೊನಾಲ್ಡ್ ಫೆರ್ನಾಂಡಿಸ್ (St Louis church dahisar mumbai) ಮಾಡಲಿದ್ದು. ಮುಖ್ಯ ಅತಿಥಿಗಳಾಗಿ ಶ್ರೀ ಎ. ಜಿ. ಕೊಡ್ಗಿ (Ex MLA and president Amasebail Charitable Trust kundapura) ಅತಿಥಿಗಳಾಗಿ ಡಾ.ಪಿ. ವಿ.ಭಂಡಾರಿ (Medical Director, Dr, A.V. Baliga Hospital Udupi) ಡಾ.ಶ್ರೀನಿವಾಸ್ ಭಟ್ ಯು (Head of Psychiatric Department KEHEMA Hospital Manglore), ರೋ ನವೀನ್ ಅಮೀನ್ (Assistant Governor Rotary District 3182 Zone 5). ಇವರು ಭಾಗವಹಿಸುತ್ತಿದ್ದು ಕಾರ್ಯಕ್ರಮವು ರೋಟರಿ ಭವನ ಶಂಕರಪುರದಲ್ಲಿ ಬೆಳ್ಳಿಗ್ಗೆ 10:30 ಕ್ಕೆ ಸರಿಯಾಗಿ ನಡೆಯಲಿದೆ.

ಹದಿನೇಳು ವರ್ಷಗಳಿಂದ ಶಂಕರಪುರದಲ್ಲಿ ಉಚಿತ ಮಾನಸಿಕ ಶಿಬಿರವನ್ನು ರೋಟರಿ ಶಂಕರಪುರವು ನಡೆಸಿಕೊಂಡು ಬರುತ್ತಿದ್ದು ಜಿಲ್ಲಾದ್ಯಂತ ಬಹಳಷ್ಟು ಶಿಬಿರಾರ್ಥಿಗಳನ್ನು ಒಳಗೊಂಡಿದೆ.

ಈ ಉತ್ತಮ ಕಾರ್ಯಕ್ಕೆ ಸಹಕರಿಸುತ್ತಿರುವ ದಾನಿಗಳಿಗೆ ರೋಟರಿ ಪ್ರಮುಖರು ಕೃತಜ್ಞತೆ ಸಲ್ಲಿಸುವ ಮುಖೇನ ಮುಂದೆಯೂ ಸಹಕಾರ ಹೀಗೆ ಇರಲಿ ಎಂದು ನಮ್ಮ ಕಾಪು ವೆಬ್ ಪೋರ್ಟಲ್ ನಲ್ಲಿ ಧನ್ಯವಾದಗಳನ್ನು ತಿಳಿಸಿದರು.