ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ - ಅದಾನಿ ಪಾಲು
Posted On:
31-10-2020 05:49PM
ಕೇಂದ್ರ ಸರಕಾರದ ಮೊದಲ ಹಂತದ ಖಾಸಗಿಕರಣ ಭಾಗವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗ್ರೂಪ್ ಆಫ್ ಕಂಪನಿಯ ಪಾಲಾಗಿದ್ದು. ಇಂದಿನಿಂದ ಅದಾನಿ ಗ್ರೂಪ್ ನ ಕೆಲಸ ಕಾರ್ಯಗಳು ಆರಂಭವಾಗಿವೇ.
ಅದಾನಿ ಕಂಪೆನಿಯು ಬಿಡ್ ಮೂಲಕ ವಿಮಾನ ನಿಲ್ದಾಣದ ಒಡೆತನವನ್ನು ಪಡೆದಿದೆ. ಮಂಗಳೂರು ವಿಮಾನ ನಿಲ್ದಾಣ ಇದೀಗ ಖಾಸಗೀ ಆಡಳಿತಕ್ಕೆ ಒಳಪಟ್ಟಿದೆ.
ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಗೊಂಡ 6ನೇ ವಿಮಾನ ನಿಲ್ದಾಣವಾಗಿದೆ. ನವೆಂಬರ್ 2ರಂದು ಲಕ್ನೋ ವಿಮಾನ ನಿಲ್ದಾಣ ಹಾಗೂ ನವೆಂಬರ್ 6ರಂದು ಅಹಮ್ಮದಾಬಾದ್ ವಿಮಾನ ನಿಲ್ದಾಣ ಅದಾನಿಗೆ ಗ್ರೂಪ್ ಒಡೆತನಕ್ಕೆ ಸೇರುವ ನಿರೀಕ್ಷೆಯಿದೆ.