ಅಜೆಕಾರು : ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಕಾನನ ಕವಿ ಕಾವ್ಯ ಸಂಭ್ರಮ ನ.1ರಂದು ಕುಪಾ೯ಡಿ ಕಾನನ ಮಂಟಪದಲ್ಲಿ ನಡೆಯಿತು.
ಪಡಿಮಂಚಕ್ಕೆ ಭತ್ತದ ತೆನೆ ಬಡಿಯುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಸಾಹಿತಿ ಕಾಂತಾವರ ಶಿವಾನಂದ ಶೆಣೈ ಈ ರಾಜ್ಯೋತ್ಸವ ಕಾಯ೯ಕ್ರಮ ವಷ೯ ಪೂತಿ೯ ನಡೆಯಬೇಕು. ಕಾಡಿನಲ್ಲಿ ಕವಿಗೋಷ್ಠಿ ವಿನೂತನ ಪ್ರಯೋಗವಾಗಿದೆ. ಕವಿಗಳು ತಮ್ಮ ಭಾಷಾ ಪ್ರಾಮುಖ್ಯದಿಂದ ಉತ್ತಮ ಕವನಗಳು ಮೂಡಿಬರಲಿ ಎಂದರು.
ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕ,ಸಾಹಿತಿ ಮೌರಿಸ್ ತಾವ್ರೋ ಮಾತನಾಡಿ ಈ ರೀತಿಯ ಕಾಯ೯ಕ್ರಮ ರಾಜ್ಯಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಬಾಲಕೃಷ್ಣ ಹೆಗ್ಡೆ, ಸುರೇಂದ್ರ ಮೋಹನ್, ಸಂಘಟಕ ಶೇಖರ ಅಜೆಕಾರು ಉಪಸ್ಥಿತರಿದ್ದರು. ಈ ಸಂದಭ೯ದಲ್ಲಿ ಗಿನ್ನೆಸ್ ಸಾಧನೆ ಮಾಡಿದ ಪ್ರಮೀಳಾ ಶೆಟ್ಟಿ, ಸೋಮೆಶ್ವರರವರನ್ನು ಗೌರವಿಸಲಾಯಿತು.ಶ್ರಜನ್ಯ ರವರಿಂದ ಭರತನಾಟ್ಯ ನಡೆಯಿತು. ನಂತರ ವಿವಿಧ ಕವಿಗಳ ಮೂಲಕ ಕವಿಗೋಷ್ಠಿ ನಡೆಯಿತು. ಅಖಿಲ ಕನಾ೯ಟಕ ಬೆಳದಿಂಗಳ ಸಾಹಿತ್ಯ ಸಮಿತಿ, ಆದಿ ಗ್ರಾಮೋತ್ಸವ ಮತ್ತು ಕ .ಸಾ.ಪ ಅಜೆಕಾರು ಹೋಬಳಿಯಿಂದ ಈ ಕಾಯ೯ಕ್ರಮ ನಡೆಯಿತು. ಸುನಿಧಿ, ಸುನಿಜಾ ಪ್ರಾರ್ಥಿಸಿ, ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.