ಪಡುಬಿದ್ರಿ : ಇಲ್ಲಿನ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳದ ಮಹಿಳಾ
ಸಿಬ್ಬಂದಿಗಳು ಪಡುಬಿದ್ರಿ ಪೇಟೆ ಭಾಗದಲ್ಲಿ ದೊರೆತ ರೂ.15 ಸಾವಿರ ನಗದು ಇದ್ದ ಪರ್ಸನ್ನು ಅದರ ವಾರಿಸುದಾರರಿಗೆ ಹಸ್ತಾಂತರಿಸಿದ ಘಟನೆ ಶನಿವಾರ ಬೆಳಿಗ್ಗೆ ಘಟಿಸಿದೆ.
ಪಡುಬಿದ್ರಿ ಜಂಕ್ಷನ್ ನಲ್ಲಿ ನಿತ್ಯವೂ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುತ್ತಿರುವ ಪಡುಬಿದ್ರಿ ಗೃಹ ರಕ್ಷಕ ದಳದ ಸಿಬ್ಬಂದಿಗಳಾದ ಅಮಿತಾ, ಸುಜಾತಾರವರವರಿಗೆ ಕರ್ತವ್ಯದಲ್ಲಿದ್ದ ಸಂದರ್ಭ ದೊರೆತ ಪರ್ಸನ್ನು ತೆರೆದು ನೋಡಿದಾಗ ನಗದು, ಜೊತೆಗೆ ಪಾನ್ ಕಾಡ್೯ ಇದ್ದು ಅದರಲ್ಲಿದ್ದ ಫೋನ್ ನಂಬರ್ಗೆ ಫೋನ್ ಮಾಡಿ ವಿಚಾರಿಸಿ ಅದರ ವಾರಿಸುದಾರರಿಗೆ ಹಸ್ತಾಂತರಿಸಿದ್ದಾರೆ.
ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.