ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಯುವವಾಹಿನಿ (ರಿ) ಕಾಪು ಘಟಕದ ಪದಪ್ರಧಾನ ಸಮಾರಂಭ, ಸಾಧಕರಿಗೆ ಸಮ್ಮಾನ

Posted On: 01-11-2020 08:52PM

ಕಾಪು, ನ. ೧: ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶದ ಪ್ರತಿಪಾಲನೆ, ಮೂಲತತ್ವಗಳನ್ನು ಅನುಸರಿಸುತ್ತಾ ವಿದ್ಯೆ, ಉದ್ಯೋಗ ಮತ್ತು ಸಂಪರ್ಕದ ಉದ್ದೇಶವನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವ ಯುವವಾಹಿನಿ ಸಂಘಟನೆಯು ಸಮಾಜದ ಜನರಲ್ಲಿ ವ್ಯಕ್ತಿತ್ವ ವಿಸನಕ್ಕೆ ಪೂರಕವಾದ ಅವಕಾಶಗಳನ್ನು ಒದಗಿಸಿಕೊಡುತ್ತಾ ಬರುತ್ತಿದೆ ಎಂದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಡಾ| ರಾಜಾರಾಮ್ ಉಪ್ಪಿನಂಗಡಿ ಹೇಳಿದರು. ಕಾಪು ಬಿಲ್ಲವರ ಸಹಾಯಕ ಸಂಘದ ಸಭಾಭನದಲ್ಲಿ ನ.೧ರಂದು ಆಯೋಜಿಸಲಾಗಿದ್ದ ಯುವವಾಹಿನಿ ಕಾಪು ಘಟಕದ ೨೦೨೦-೨೧ನೇ ಸಾಲಿನ ನೂತನ ಪದಾಽಕಾರಿಗಳ ಪದಪ್ರಧಾನ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋದಿಸಿ ಅವರು ಮಾತನಾಡಿದರು. ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾ ಹೋಗುವಾಗ ನಮ್ಮ ಅಗತ್ಯತೆಗಳನ್ನು ಅರಿತುಕೊಂಡು ನಾವು ಮುನ್ನಡೆಯಬೇಕಿದೆ. ಕುಟುಂಬ, ಉದ್ಯೋಗ ಮತ್ತು ಸಂಘಟನೆ ಎಂಬ ಮೂರು ವಿಧದ ಜೀವನ ಶೈಲಿಯೊಂದಿಗೆ ಮುನ್ನಡೆದಾಗ ಮಾತ್ರಾ ಸಂಘಟನೆ ಯಶಸ್ವಿಯಾಗಿ ಬೆಳೆಯಲು ಸಾಧ್ಯವಿದೆ. ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕ್ರಮಗಳೊಂದಿಗೆ, ಘಟಕ ಮಟ್ಟದಲ್ಲೂ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕಾಪು ಯುವವಾಹಿನಿ ಘಟಕವನ್ನು ಮಾದರಿ ಘಟಕವನ್ನಾಗಿ ಮೂಡಿ ಬರುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಯುವವಾಹಿನಿ ಕಾಪು ಘಟಕದ ೨೦೨೦-೨೧ನೇ ಸಾಲಿನ ಅಧ್ಯಕ್ಷರಾಗಿ / ಪ್ರಥಮ ಮಹಿಳಾ ಅಧ್ಯಕ್ಷರಾಗಿ ನಿಯೋಜನೆಗೊಂಡ ಸೌಮ್ಯ ರಾಕೇಶ್ ಅವರಿಗೆ ನಿರ್ಗಮನ ಅಧ್ಯಕ್ಷ ನಾಗೇಶ್ ಸುವರ್ಣ ಅವರು ಅಧಿಕಾರ ಹಸ್ತಾಂತರಿಸಿದರು. ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ್ ಪೂಜಾರಿ ಕಾಪು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ  ಲಕ್ಷ್ಮಣ್ ಸಾಲ್ಯಾನ್, ಉಪಾಧ್ಯಕ್ಷ ಉದಯ ಅಮೀನ್ ಮೂಲ್ಕಿ, ಸಂಘಟನಾ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಯುವವಾಹಿನಿ ಕಾಪು ಘಟಕದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅನಿಲ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಡಾ| ರಾಜಾರಾಮ್, ಯುವವಾಹಿನಿ ಕಾಪು ಘಟಕದ ನಿರ್ಗಮನ ಅಧ್ಯಕ್ಷ ನಾಗೇಶ್ ಸುವರ್ಣ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಅಧ್ಯಕ್ಷ ನಾಗೇಶ್ ಸುವರ್ಣ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ್ ಸಾಲ್ಯಾನ್ ವರದಿ ವಾಚಿಸಿ, ವಂದಿಸಿದರು.