ತುಳುನಾಡಿನ ಕಾರ್ಕಳ ತಾಲೂಕಿನ ಹಿರ್ಗಾನದ ಮಾಸ್ಟರ್ ಕಾರ್ತಿಕ್ ಹಾಡಿರುವ ದೈವ ದೇವರ ಹಾಡೊಂದು ಬಾರಿ ಜನ ಮನ್ನಣೆಗೆ ಪಾತ್ರ ವಾಗಿತ್ತು.
ಈತನ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.
ಹುಟ್ಟಿನಲ್ಲಿ ಅಂಗವಿಕಲನಾಗಿದ್ದ ಮಾಸ್ಟರ್ ಕಾರ್ತಿಕ್ ದೈವ ದೇವರ ಹರಿಕೆಯಿಂದ ನಡೆಯುವಂತಾಗಿದ್ದು ಪೋಷಕರಿಗೆ ಅಚ್ಚರಿಯನ್ನುಂಟು ಮಾಡಿತ್ತು.
ಕಾರ್ತಿಕ್ ಕೊರಗಜ್ಜ ದೈವದ ಹಾಗೂ ಇನ್ನಿತರ ದೈವದ ಹಾಡುಗಳನ್ನು ಬಾಯಿಪಾಠ ಮಾಡಿಕೊಳ್ಳುತ್ತಿದ್ದ. ಇದೀಗ ಈತ ಹಾಡಿರುವ ಹಾಡುಗಳು ಬಾರಿ ವೈರಲ್ ಆಗಿದ್ದು..
ಕಾರ್ತಿಕ್ ಕಷ್ಟವನ್ನರಿತ ಕಾರ್ಕಳ ತಾಲೂಕು ದೈವಾರಾಧಕರ ಸಂಘದ ಪದಾಧಿಕಾರಿಗಳು ನಿನ್ನೆ ಕಾರ್ಕಳದಲ್ಲಿರುವ ಆತನ ಮನೆಗೆ ಭೇಟಿ ನೀಡಿ ಸಮ್ಮಾನಿಸುವ ಮೂಲಕ ಆತನನ್ನು ಗುರುತಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಮಾಳ, ಪ್ರಧಾನ ಕಾರ್ಯದರ್ಶಿ ಸದಾನಂದ ಸಾಲಿಯಾನ್ ಕೆರ್ವಾಸೆ, ಉಪಾಧ್ಯಕ್ಷರು ಸಚಿನ್ ಸಾಲಿಯಾನ್, ಗೌರವ ಸಲಹೆಗಾರರಾದ ಸೂರ್ಯಕಾಂತ್ ದೇವಾಡಿಗ ಕಾರ್ಕಳ, ಸಾಣೂರು ವಲಯದ ಉಪಾಧ್ಯಕ್ಷರಾದ ಬಾರಾಡಿ ಬೊಗ್ಗು ಪಾಣಾರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಾರಾಡಿ ಮೊಂಟು ಪಾಣಾರ, ಸೇಸಪ್ಪ ಪಾಣಾರ ಮೂರೂರು ಹಾಗೂ ಇನ್ನಿತರರು ಉಪಸ್ಥಿತರಿದ್ದು. ಮಾಸ್ಟರ್ ಕಾರ್ತಿಕ್ ಗೆ ಶುಭ ಹಾರೈಸಿದರು.
ಈ ಬಡ ಸಂಸಾರಕ್ಕೆ ಸಹಾಯ ನೀಡಲಿಚ್ಚಿಸುವವರು ಸಂಪರ್ಕಿಸಿ : 7022145910