ದೀಪಾವಳಿಯ ಸಂಧರ್ಭದಲ್ಲಿ ತಯಾರಿಸುವ ಗೂಡುದೀಪ( ಆಕಾಶ ಬುಟ್ಟಿ) ದಲ್ಲಿ ಈ ವರ್ಷದಲ್ಲಿ ಜನರನ್ನು ಸಂಕಷ್ಟಕ್ಕೆ ದೂಡಿದ ಕೋರೋನಾ ಸೋಂಕಿನ ಬಗ್ಗೆ ಜಾಗೃತಿ ಸಂದೇಶವನ್ನು ಬಂಟಕಲ್ಲು ಕೆ ಆರ್ ಪಾಟ್ಕರ್ ರವರು ಮನೆಯಲ್ಲಿಯೇ ತಯಾರಿಸಿದ 10 ಅಡಿ ಎತ್ತರವಿರುವ
ಆಕಾಶಬುಟ್ಟಿಯಲ್ಲಿ ನೀಡಿದ್ದಾರೆ.
ಕಳೆದ ವರ್ಷದ ದೀಪಾವಳಿಯ ಸಂಧರ್ಭ ತಯಾರಿಸಿದ ಆಕಾಶಬುಟ್ಟಿಯಲ್ಲಿ ಪ್ಲಾಸ್ಟಿಕ್ ನಿಷೇದ ಹಾಗೂ ಸ್ವಚ್ಚತೆಯ ಸಂದೇಶ ನೀಡಿದ್ದರು . ಮಾಸ್ಕ್ ಧಾರಣೆ, ಸಾಮಾಜಿಕ ಅಂತರದ ಮಾಹಿತಿಯನ್ನು ನೀಡಿ ಕರೋನಾ ಇನ್ನೂ ಹೋಗಿಲ್ಲ , ಲಸಿಕೆ ದೊರೆಯುವ ವರೆಗೆ ಎಚ್ಚರಿಕೆಯಿಂದಿರುವಂತೆ ಜಾಗೃತಿ ಸಂದೇಶವನ್ನು ನೀಡಿದ್ದಾರೆ.