ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವದ ಕಡಂಬುವಿನಲ್ಲಿ ರಾರಾಜಿಸುತ್ತಿದೆ 12 ಅಡಿ ಎತ್ತರದ ಗೂಡುದೀಪ

Posted On: 14-11-2020 11:55PM

ದೀಪಾವಳಿ ಸಂದರ್ಭದಲ್ಲಿ ಶಿರ್ವ ಸಮೀಪದ ಕಡಂಬುವಿನ ಯುವಕರ ತಂಡವೊಂದು ಬರೋಬ್ಬರಿ 12 ಅಡಿ ಎತ್ತರವುಳ್ಳ ಗೂಡು ದೀಪವೊಂದನ್ನು ತಯಾರು ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನಮೋ ಫ್ರೆಂಡ್ಸ್ ಕಡಂಬು ತಂಡದ ಯುವಕರು ಸೇರಿ ಶಿರ್ವ ಕಡಂಬು ಸರ್ಕಲ್ ನಲ್ಲಿ ಗೂಡುದೀಪವನ್ನು ಹಾಕಿದ್ದಾರೆ.

ಸಮಾನ ಮನಸ್ಕ ಯುವಕರು ಸೇರಿ ತಯಾರಿಸಲಾಗಿರುವ ಈ ಗೂಡುದೀಪ ಜನರಿಗೆ ಆಕರ್ಷಕವಾಗಿ ಕಂಡಿದ್ದು ಜನರು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಆಕಾಶ ಬುಟ್ಟಿ ಯನ್ನು ಕೊರೋನಾ ಸಂಕಷ್ಟ ಎಂಬ ಕತ್ತಲಲಿ ಇರುವ ಜನರಿಗೆ ಬೆಳಕನ್ನು ನೀಡುವ ಸಂದೇಶವಾಗಿದೆ ಎಂದು ತಂಡದ ಮುಖ್ಯಸ್ಥ ರಕ್ಷಿತ್ ಪೂಜಾರಿ ಶಿರ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.