ಮುಂಬೈಯ ಪೇಜಾವರ ಮಠದಲ್ಲಿ ಜಯ ಸುವರ್ಣರಿಗೆ ನುಡಿನಮನ
Posted On:
15-11-2020 05:20PM
ಮುಂಬೈ : ಸಮಾಜವನ್ನು ಪ್ರೀತಿ ಮತ್ತು ವಿಶ್ವಾಸದಿಂದ ಗೆದ್ದ ಜಯ ಸುವರ್ಣರು ದೈವಾಧೀನರಾದ ಸುದ್ದಿ ತುಂಬಾ ವಿಷಾದವನ್ನು ತಂದಿತ್ತು. ಅವರಿಗೆ ನುಡಿನಮನ ನೀಡಬೇಕೆನ್ನುವ ನನ್ನ ಇಚ್ಛೆಗೆ ಭಗವಂತ ಮುಂಬಯಿಯ ಪೇಜಾವರ ಮಠವನ್ನು ಆಯ್ಕೆ ಗೊಳಿಸಿದ್ದೇನೆ. ನಾನು ಈ ನಗರಕ್ಕೆ ಅಪರಿಚಿತ ಆದರೆ ಜಯ ಸುವರ್ಣರು ಅಪಾರ ಸೇವಾಕಾರ್ಯಗಳನ್ನು ಮಾಡಿ ಮುಂಬೈಗೆ ಮಾತ್ರ ಪರಿಚಿತರ ಅಲ್ಲದೇ ಊರಿನಲ್ಲಿ ಅಪಾರ ಪರಿಚಿತರು. ಏಕೆಂದರೆ ಅವರಿಂದ ಊರಿನಲ್ಲಿ ತುಂಬಾ ಕೆಲಸಕಾರ್ಯಗಳು ನಡೆದಿದೆ ಸಮಾಜದ ಬಹಳಷ್ಟು ಅಭಿವೃದ್ಧಿಯಾಗಿದೆ . ಮನುಕುಲವನ್ನು ಪ್ರೀತಿಸಿದ ಜಯ ಸುವರ್ಣರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಿದೆ ಎಂದು ಉಡುಪಿ ಪೇಜಾವರ ಮಠದ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಸುವರ್ಣರಿಗೆ ನುಡಿನಮನ ಸಲ್ಲಿಸಿದರು
ಶ್ರೀಗಳು ನವಂಬರ್ 13 ರಂದು ಸಾಂತಕ್ಲಾಸ್ ಪೂರ್ವದ ಪೇಜಾವರ ಮಠದ ಮದ್ವ ಭವನದ ಶ್ರೀ ವಿಶ್ವೇಶ್ವರ ತೀರ್ಥ ಸಭಾಗೃಹದಲ್ಲಿ ನಡೆದ ಬಿಲ್ಲವ ಸಮಾಜದ ಕುಲರತ್ನ. ಬಿಲ್ಲವರ ಎಸೋಸಿಯೇಶನ್ ನ ಮಾಜಿ ಅಧ್ಯಕ್ಷ ಜಯ ಸುವರ್ಣರ ನುಡಿನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನುಡಿ ನಮನ ಸಲ್ಲಿಸಿದರು ಜಯ ಸುವರ್ಣರು ತನ್ನ ಬದುಕನ್ನು ಮಾತ್ರ ಕಟ್ಟದೆ ಸಮಾಜವನ್ನ ಕಟ್ಟಿ. ಸರ್ವ ಸಮಾಜದ ಬಂಧುಗಳನ್ನು ಪ್ರೀತಿಸಿ ಅವರಿಗೆ ಸದಾ ಸಹಕಾರವನ್ನು ನೀಡುತ್ತಾ ಬಂದವರಾಗಿದ್ದಾರೆ. ನಮ್ಮೆಲ್ಲರ ಬದುಕು ಇನ್ನೊಬ್ಬರ ಶ್ರೇಯಸ್ಸಿಗೆ ಮತ್ತು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಬದುಕಾಗಬೇಕು ಅದರಲ್ಲಿ ಭಗವಂತನಿರುತ್ತಾನೆ ಅಂತ ಕಾಯಕವನ್ನು ಜಯ ಸುವರ್ಣರ ಬದುಕಿನಲ್ಲಿ ಮಾಡಿದ್ದಾರೆ. ಅವರಿಗೆ ಭಗವಂತ ಸದಾ ಅನುಗ್ರಹ ನೀಡಿರುತ್ತಾನೆ ಜಯ ಸುವರ್ಣರ ಪರಿವಾರಕ್ಕೆ ಶ್ರೀ ದೇವರು ಸದಾ ಆಶೀರ್ವದಿಸಲಿ. ಸತ್ಕಾರ್ಯಗಳನ್ನು ಮಾಡುವ ಬಿಲ್ಲವ ಭವನ . ಬಿಲ್ಲವರ ಭವನವಾಗದೆ ಬಲ್ಲವರ ಭವನವಾಗಲಿ ಎಂದು ನುಡಿದರು.
ಬಿಲ್ಲವರ ಎಸೋಸಿಯೇಷನ್ಅಧ್ಯಕ್ಷ ಚಂದ್ರಶೇಖರ್ ಪೂಜಾರಿಯವರು ನುಡಿನಮನ ಸಲ್ಲಿಸುತ್ತಾ .ನಮ್ಮೆಲ್ಲರ ಬದುಕಿನಲ್ಲಿ ಹುಟ್ಟು ಅನಿರೀಕ್ಷಿತ ಸಾವು ನಿಶ್ಚಿತ .ಈ ನಡುವೆ ನಮ್ಮ ಬದುಕು ಹೇಗಿರಬೇಕು ಎನ್ನುವುದಕ್ಕೆ ಜಯ ಸುವರ್ಣರೇ ಮಾದರಿ. ಎಲ್ಲಾ ಸಮಾಜದವರು ಅವರನ್ನು ಒಪ್ಪುವಂತ ಸೇವೆ ಮಾಡಿದ ಮಹಾನ್ ಚೇತನವನ್ನು ಭಗವಂತ ಬೇಗನೆ ತನ್ನಲ್ಲಿ ಕರೆಸಿಕೊಂಡ. 32ವರ್ಷಗಳ ಒಡನಾಡಿ ನಲ್ಲಿದ್ದ ನನ್ನ ಮತ್ತು ಜಯ ಸುವರ್ಣರ ಸಂಬಂಧ. ಅವರು ಯಾವುದೇ ಜಾತಿಯನ್ನು ಕೇಳಿ ಸಹಯವನ್ನು ಮಾಡಿದವರಲ್ಲ. ಅವರಲ್ಲಿದ್ದ ಸಂಘಟನಾ ಚತುರತೆ ಮತ್ತು ಶಿಸ್ತು .ಸಮಯಪಾಲನೆ ಯಾರಿಂದಲೂ ಸಾಧ್ಯವಾಗದು. ಬಿಲ್ಲವ ಭವನದ ನಿರ್ಮಾಣ. ಊರಿನಲ್ಲಿ ಶಿಕ್ಷಣ ಸಂಸ್ಥೆ ನಿರ್ಮಾಣ ಕಾರ್ಯಗಳು ಜಯ ಸುವರ್ಣರ ಸಾಧನೆಗೆ ಸಾಕ್ಷಿ .ಅವರ ಪರಿವಾರಕ್ಕೆ ಶ್ರೀಕೃಷ್ಣನ ಅನುಗ್ರಹವಿರಲಿ ಅವರು ಇನ್ನಷ್ಟು ಉನ್ನತ ಮಟ್ಟದಲ್ಲಿ ಸಮಾಜದಲ್ಲಿ ಬೆಳೆಯಲಿ ಎಂದು ನನ್ನ ಆರೈಕೆ. ಎಂದು ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಖಾರ್ ಪೂರ್ವದ ಶನಿ ಮಂದಿರದ ಗೌರವ ಅಧ್ಯಕ್ಷ ಶಂಕರ್ ಸುವರ್ಣ ಕುದ್ರೋಳಿ .ಜಯ ಸುವರ್ಣರಿಗೆ ನುಡಿನಮನ ಸಲ್ಲಿಸುತ್ತಾ ನಾರಾಯಣ ಗುರುಗಳ ತತ್ವಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಅವರು ಮಾಡಿರುವ ಸೇವಾಕಾರ್ಯಗಳು ಅವಿಸ್ಮರಣೀಯವಾಗಿದೆ. ಎಲ್ಲರನ್ನೂ ತನ್ನ ಬಂಧುಗಳ ಎಂದು ಪ್ರೀತಿಸುತ್ತಾ ಗೌರವಿಸುತ್ತಾ ಸಮಾಜವನ್ನು ಕಟ್ಟಿ ಬೆಳೆಸಿದ ಸುವರ್ಣರ. ಇಂದಿನ ಜನಾಂಗಕ್ಕೆ ಆದರ್ಶರಾಗಿದ್ದಾರೆ ಎಂದು ನುಡಿದರು.
ಅಂದೇರಿ ಪಶ್ಚಿಮದ ಅದಮಾರು ಮಠದ ಪ್ರಬಂಧಕ ರಾಜೇಶ್ ರಾವ್ ಅವರು ಜಯ ಸುವರ್ಣರು ಸಮಾಜದಲ್ಲಿ ಹೇಗೆ ಕಟ್ಟಿದ್ದಾರೆ ಮತ್ತು ಎಲ್ಲಾ ಸಮಾಜದವರನ್ನು ಕೂಡ ಗೌರವಿಸುತ್ತಿದ್ದರು ಅವರು ನಡೆದ ದಾರಿಯಲ್ಲಿ ಸಮಾಜ ಬೆಳೆಯಬೇಕು. ಕೋರೋಣ ಸಂದರ್ಭದಲ್ಲೂ ಕೂಡ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಜನಸಾಗರವನ್ನು ಕಂಡಾಗ ಅವರು ಸಮಾಜಕ್ಕೆ ನೀಡಿದ ಕೊಡುಗೆ ತಿಳಿಯಬಹುದು ಎಂದು ನುಡಿದರು.
ಪ್ರಪ್ರಥಮ ಬಾರಿಗೆ ಪೇಜಾವರ ಮಠದಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಸಮಾಜ ಸೇವಕನಿಗೆ ನುಡಿನಮನ :
ಸಮಾಜದಲ್ಲಿ ಬಹಳಷ್ಟು ಜನ ತಮ್ಮ ಕರ್ತವ್ಯದ ಸೇವೆಗಳನ್ನು ನಿರ್ವಹಿಸಿಕೊಂಡು ಅಸ್ತಂಗತ ರಾಗುತ್ತಾರೆ ಆದರೆ ಬಿಲ್ಲವ ಸಮಾಜದ ಮುಖಂಡ ಜಯ ಸುವರ್ಣ ಅವರ ಅಗಲುವಿಕೆ ತುಳು ಕನ್ನಡಿಗರಿಗೆ ಬಾಳಷ್ಟು ದುಃಖ ತಂದಿದೆ . ಇದರಿಂದಾಗಿ ಅಷ್ಟಮಠಗಳಲ್ಲಿ ಒಂದಾಗಿರುವ ಪೇಜಾವರಮಠದ ಮಠಾಧೀಶರ ಉಪಸ್ಥಿತಿಯಲ್ಲಿ .ಪೇಜಾವರ ಮಠದಲ್ಲಿ ನುಡಿನಮನ ನಡೆಯುತ್ತಿರುವುದು ಇದು ಮಹಾನಗರದಲ್ಲಿ ಪೇಜಾವರ ಮಠದಲ್ಲಿ ಪ್ರಥಮ ಬಾರಿಗೆ. ಮಠದ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೇಶದ ಪ್ರಮುಖ ನಗರವಾಗಿರುವ ಅಯೋಧ್ಯ. ದೆಹಲಿ .ಲಕ್ನೋ. ಬದ್ರಿನಾಥ್ ನಂತ ಪವಿತ್ರ ಕ್ಷೇತ್ರಗಳ ಯಾತ್ರೆಗಳನ್ನು ಮುಗಿಸಿ ಪೇಜಾವರ ಮಠದಲ್ಲಿ ಜಯ ಸುವರ್ಣರ ನುಡಿನಮನ ದಲ್ಲಿ ಉಪಸ್ಥಿತರಿದ್ದು ಅವರ ಪರಿವಾರವನ್ನು ಮತ್ತು ಸಮಾಜಕ್ಕೆ ಎಂದು ಹರಸಿದರು.
ಕಾರ್ಯಕ್ರಮವನ್ನು ಪೇಜಾವರ ಮಠದ ಪ್ರಬಂಧಕ ಡಾ. ರಾಮದಾಸ್ ಉಪಾಧ್ಯಾಯ ನಿರೂಪಿಸುತ್ತಾ ಪೇಜಾವರಶ್ರೀಗಳ ಯೋಜನೆಗಳು ತಿಳಿಸಿದ ಬಳಿಕ ಜಯ ಸುವರ್ಣರ ಬದುಕಿನ ಸಾಧನೆಗಳನ್ನು ತಿಳಿಸಿದರು ಸಭೆಯಲ್ಲಿ ಜಯ ಸುವರ್ಣರ ಸುಪುತ್ರ ಸೂರ್ಯಕಾಂತ್ ಜಯ ಸುವರ್ಣ. ಅಳಿಯ ಭಾಸ್ಕರ್ ಎಂ ಸುವರ್ಣ. ಬಾವ ರಾಮ ಸುವರ್ಣ ಗೊರೆಗಾವ್ ಮತ್ತು ದೇವೇಂದ್ರ ಬಂಗೇರ. ಬಿಲ್ಲವರ ಅಸೋಸಿಯೇಶನ್ ಕಾರ್ಯದರ್ಶಿ ರವೀಂದ್ರ ಶಾಂತಿ . ಅಸೋಸಿಯೇಷನ್ ಧಾರ್ಮಿಕ ಉಪ ಸಮಿತಿಯ ಕಾರ್ಯ ಧ್ಯಕ್ಷ ಮೋಹನದಾಸ್ ಜಿ ಪೂಜಾರಿ ಯುವ ಅಭ್ಯುದಯದ ಕಾರ್ಯ ಅಧ್ಯಕ್ಷ ನಾಗೇಶ್ ಕೋಟ್ಯಾನ್. ಸ್ಥಳೀಯ ಮಾಜಿ ನಗರ ಸೇವಕ ಶೇಖರ್ ಸಾಲ್ಯಾನ್ ಹಾಗೂ ಪೇಜಾವರ ಮಠದ ಪ್ರಬಂಧಕರಾದ ಪ್ರಕಾಶ್ ಆಚಾರ್ಯ ನಿರಂಜನ್ ಭಟ್ ಹರಿ ಭಟ್ ಮತ್ತು ಮುಕುಂದ್ ಭಟ್ . .ಪವನ್ ಆಚಾರ್ಯ. ಆದ್ಯ ಭಟ್. ಹಾಗೂ ಅಪಾರ ಜಯ ಸುವರ್ಣರ ಅಭಿಮಾನಿಗಳು ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.