ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆಯಲ್ಲಿ ಮಾತೃಶಕ್ತಿ, ದುರ್ಗಾವಾಹಿನಿ ಘಟಕ ಉದ್ಘಾಟನೆ

Posted On: 18-11-2020 10:38PM

ಹಿಂದುತ್ವದ ಭದ್ರಕೋಟೆ ಇನ್ನಂಜೆಯಲ್ಲಿ ಕಳೆದ ಒಂದೆರಡು ತಿಂಗಳ ಹಿಂದೆಯಷ್ಟೇ ವಿಶ್ವ ಹಿಂದೂ ಪರಿಷತ್, ಭಜರಂಗದಳದ ವಿಷ್ಣು ವಲ್ಲಭ ಘಟಕ ಉದ್ಘಾಟನೆಯಾಗಿದ್ದು ಇದೀಗ ಮಾತೃ ಶಕ್ತಿ ಮತ್ತು ದುರ್ಗಾ ವಾಹಿನಿ ಘಟಕ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಮಾತೃ ಶಕ್ತಿ ಪ್ರಖಂಡದ ಪೂರ್ಣಿಮಾ ಸುರೇಶ್ ನಾಯಕ್ ಹಿಂದುತ್ವದ ಉಳಿವಿಗಾಗಿ ಎಲ್ಲರು ಸಹೋದರತೆಯ ಭಾವನೆಯಿಂದ ಹೋರಾಟ ಮಾಡಬೇಕು, ಸಾವಿರಾರು ಜನರು ಹಿಂದುತ್ವಕ್ಕಾಗಿ ಬಲಿದಾನಗೈದಿದ್ದು, ನಾವು ಅವರಂತೆ ಹಿಂದುತ್ವದ ಉಳಿವಿಗಾಗಿ ಶ್ರಮಿಸಬೇಕಿದೆ ಎಂದರು. ನಂತರ ಮಾತೃ ಶಕ್ತಿ ಸಂಚಾಲಕರಾಗಿ ಶ್ರೀಮತಿ ಆಶಾ, ಸಹ ಸಂಚಾಲಕರಾಗಿ ಶ್ರೀಮತಿ ಲಕ್ಷ್ಮಿ. ದುರ್ಗಾವಾಹಿನಿ ಸಂಚಾಲಕರಾಗಿ ಕುಮಾರಿ ವಿದ್ಯಾ, ಸಹ ಸಂಚಾಲಕರಾಗಿ ಕುಮಾರಿ ಪದ್ಮ ಶ್ರೀ ಇವರಿಗೆ ಶಾಲು ಹಾಕಿ, ತಿಲಕ ಹಚ್ಚಿ ನೂತನ ಜವಾಬ್ದಾರಿ ಘೋಷಣೆ ಮಾಡಿದರು.
ಉದ್ಘಾಟಕರಾಗಿ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾದ ವಿಷ್ಣುಮೂರ್ತಿ ಮಂಜಿತ್ತಾಯ ದೀಪ ಬೆಳಗುವುದರ ಮೂಲಕ ಕಾರ್ಯಕರ್ತರಿಗೆ ಹಿತವಚನಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಕಾಪು ತಾಲೂಕು ಪ್ರಖಂಡದ ಕಾರ್ಯದರ್ಶಿಗಳಾದ ಜಯಪ್ರಕಾಶ್, ವಿಶ್ವ ಹಿಂದೂ ಪರಿಷತ್ ವಿಶ್ವ ವಲ್ಲಭ ಘಟಕದ ಅಧ್ಯಕ್ಷರಾದ ವಿದ್ವಾನ್ ಕೆ.ಪಿ ಶ್ರೀನಿವಾಸ ತಂತ್ರಿ ಮಡುಂಬು, ಜಿಲ್ಲಾ ಮಾತೃ ಶಕ್ತಿ ಪ್ರಧಾನರಾದ ಪ್ರತೀಕ್ಷಾ ಗುರುರಾಜ್, ಮಾಲಿನಿ ಶೆಟ್ಟಿ ಇನ್ನಂಜೆ, ವಿಷ್ಣು ವಲ್ಲಭ ಘಟಕ ಭಜರಂಗದಳದ ಸಂಚಾಲಕರಾದ ರಾಜೇಶ್ ಕುಲಾಲ್, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನಿತೇಶ್ ಸಾಲ್ಯಾನ್ ಕಲ್ಯಾಲು ಹಾಗೂ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀನಿವಾಸ ತಂತ್ರಿ ಸ್ವಾಗತಗೈದರು, ಮಾಲಿನಿ ಶೆಟ್ಟಿ ಇನ್ನಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.