ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್ಲು : ನೀರು ಕೇಳುವ ನೆಪದಲ್ಲಿ ಹಾಡಹಗಲೇ ಮಹಿಳೆಯ ಚಿನ್ನ ದೋಚಿದ ಅಪರಿಚಿತ

Posted On: 21-11-2020 11:03PM

ಇಂದು ಸಂಜೆ ಗಂಟೆ 6.30 ರ ಹೊತ್ತಿಗೆ ಬಂಟಕಲ್ಲು ದೇವಸ್ಥಾನದ ಬಳಿಯಲ್ಲಿ ವಾಸವಿರುವ ಒಬ್ಬಂಟಿ ಮಹಿಳೆಯ ಮನೆ ಬಳಿ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪದಲ್ಲಿ ಬಂದು ಆ ಮಹಿಳೆ ನೀರು ತರಲು ಮನೆಯೊಳಗೆ ಹೋದಾಗ ಆ ವ್ಯಕ್ತಿ ಅವರನ್ನು ಹಿಂಬಾಲಿಸಿ ಮನೆಯೊಳಗೆ ಹೋಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 1.75 ಲಕ್ಷ ರೂ ಮೌಲ್ಯದ ಬಂಗಾರದ ಚೈನನ್ನು ಎಳೆದು ಕೊಂಡು ಬೈಕಿನಲ್ಲಿ ಪರಾರಿಯಾದ ಘಟನೆ ನಡೆದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪರಿಚಿತರ ಮೇಲೆ ಕರುಣೆ ತೋರದಿರಿ
ಅಪರಿಚಿತ ವ್ಯಕ್ತಿಗಳು ಯಾರೇ ಆಗಲಿ ನೀರು ಕೇಳುವ ಅಥವಾ ಯಾವುದೇ ಕಾರಣಕ್ಕೂ ಮನೆ ಬಳಿ ಬಂದರೆ ಅವರನ್ನು ಒಳಬರಲು ಬಿಡಬೇಡಿ. ಅಥವಾ ನೀರು ಕೊಡುವೂದಕ್ಕೂ ಹೋಗಬೇಡಿ. ಯಾವುದೇ ಸಹಾಯ ಯಾಚಿಸಿ ಬಂದರೂ , ಮಹಿಳೆ ಅಥವಾ ಪುರುಷರೇ ಆಗಿರಲಿ ಅವರು ಅಪರಿಚಿತರಾದರೆ ಅವರಿಗೆ ಇಂದಿನ ಪರಿಸ್ಥಿತಿಯಲ್ಲಿ ಯಾವುದೇ ಕರುಣೆ, ಪಾಪ ಪುಣ್ಯ ನೋಡಲು ಹೋಗಬೇಡಿ. ಯಾವಾಗ ಯಾರು ಯಾವ ವೇಷದಲ್ಲಿ ಬಂದು ನಮ್ಮನ್ನು ವಂಚಿಸುತ್ತಾರೆ ಎಂದು ಊಹಿಸಲೂ ಕಷ್ಟ.
ಮುಖ್ಯವಾಗಿ ಒಬ್ಬಂಟಿಯಾಗಿರುವವರು, ಮಹಿಳೆಯರು ಎಚ್ಚರಿಕೆಯಿಂದಿರಬೇಕು.
ನೀರು ಕೇಳುವುದು, ದಾರಿ ಕೇಳುವುದು, ವಸ್ತುಗಳನ್ನು ಮಾರಾಟ ಮಾಡಲು ಬರುವುದು ಹೀಗೆ ಯಾವುದೇ ವಿಧದಲ್ಲೂ ಬರುವವರಿದ್ದಾರೆ. ಬೆಳಿಗ್ಗೆ ವಾಕಿಂಗ್ ಹೋಗುವವರೂ ಎಚ್ಚರಿಕೆಯಿಂದಿರಬೇಕು.. ಬೆಲೆಬಾಳುವ ಆಭರಣಗಳ ಬಗ್ಗೆ ಜಾಗರೂಕರಾಗಿರಿ.
ಯಾರೇ ಅಪರಿಚಿತರು ಬಂದಾಗ ಅತೀ ಜಾಗರುಕತೆ ಇರಲಿ. ಯಾರಿಗೂ ಕರುಣೆ,ಪಾಪ,ಪುಣ್ಯ ನೋಡಬೇಡಿ.
ಈ ಬಗ್ಗೆ ಮಕ್ಕಳಿಗೂ ತಿಳಿಹೇಳಬೇಕು, ನಾವು ಎಷ್ಟೇ ಬುದ್ದಿವಂತರಿದ್ದರೂ ಮೋಸಹೋಗುತ್ತೇವೆ. ಎಚ್ಚರಿಕೆ ಇರಲಿ.
ಕೆ ಆರ್ ಪಾಟ್ಕರ್ ಬಂಟಕಲ್ಲು