ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಲ್ಲಿ ನೂತನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಾನಾರಂಭ ಕಾರ್ಯಕ್ರಮ ಶ್ರೀ ನಾಗವೃಜ ಕ್ಷೇತ್ರ ಪಾವಂಜೆ ಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಿ ಮಾತನಾಡಿ ಯಕ್ಷಗಾನಾರಾಧನೆ ಮೂಲಕ ನೂತನ ಮೇಳ ಆರಂಭಿಸಿದ ಪಟ್ಲ ಸತೀಶ್ ಶೆಟ್ಟಿಯವರಿಗೆ ಯಶಸ್ಸು ದೊರೆಯಲಿ, ನಿರಂತರ ಯಕ್ಷಗಾನದ ಮೂಲಕ ಕಷ್ಟದಲ್ಲಿರುವ ಕಲಾವಿದರ ಕಣ್ಣೊರೆಸುವ ಕೆಲಸ ಸಮಾಜದಿಂದ ಆಗಲಿ ಎಂದರು. ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ವೇದ ಕೃಷಿಕ ಕೆಎಸ್ ನಿತ್ಯಾನಂದ ಶುಭಾಶಂಸನೆಗೈದರು.
ಸಮಾರಂಭದ ವಿಶೇಷ ಅಭ್ಯಾಗತರಾಗಿ, ಮಾಜೀ ಸಚಿವರಾದ ಅಭಯಚಂದ್ರ ಜೈನ್, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು,ತಾ. ಪಂ. ಸದಸ್ಯ ಜೀವನ್ ಪ್ರಕಾಶ್,ಮುಂಬೈ ಭವಾನಿ ಶಿಪ್ಪಿಂಗ್ ನ ಕೆ.ಡಿ ಶೆಟ್ಟಿ, ಬರೋಡ ತುಳು ಕೂಟದ ಅಧ್ಯಕ್ಷರಾದ ಶಶಿಧರ್ ಶೆಟ್ಟಿ, ವಿದ್ವಾನ್ ಯೋಗಿಂದ್ರ ಭಟ್ ಪುತ್ತಿಗೆ ಮಠ, , ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್, ಮುಗುಳಿ ತಿರುಮಲೇಶ್ವರ ಭಟ್, ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಎಸ್ ವಿ ಮಯ್ಯ ತಡಂಬೈಲ್, ಶ್ರೀಪತಿ ಭಟ್ ಮೂಡಬಿದ್ರೆ, ಸುದೇಶ್ ಕುಮಾರ್ ರೈ, ದಿವಾಕರ್ ರಾವ್, ಪಂಚ ಮೇಳದ ಸಂಚಾಲಕರಾದ ಕಿಶನ್ ಹೆಗ್ಡೆ, ಮಹಾಬಲ ಶೆಟ್ಟಿ ಪಟ್ಲ ಗುತ್ತು, ಯಾದವ ಕೋಟ್ಯಾನ್ ಪೆರ್ಮುದೆ, ಸುರತ್ಕಲ್ ಬಂಟರ ಸಂಘದ ಸುಧಾಕರ ಪೂಂಜ, ಧರ್ಮೇಂದ್ರ ಗಣೇಶಪುರ, ಚಂದ್ರಶೇಖರ ನಾಣಿಲ್, ರಾಮದಾಸ ಪಾವಂಜೆ, ಶಿವಾನಂದ ಪ್ರಭು, ರಾಮ ಟಿ ಕಾಂಚನ್, ಪೀತಾಂಬರ ಶೆಟ್ಟಿಗಾರ, ವಾಮನ್ ಇಡ್ಯಾ, ಬುಜಬಲಿ ಧರ್ಮಸ್ಥಳ, ದೇವಳದ ಆಡಳಿತ ಮೊಕ್ತೇಸರ ಎಂ ಶಶೀಂದ್ರ ಕುಮಾರ್, ಧರ್ಮದರ್ಶಿ ಯಾಜಿ ನಿರಂಜನ ಭಟ್, ಹಾಗೂ ಮೇಳದ ಸಂಚಾಲಕರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ,ಮತ್ತಿತರರು ಉಪಸ್ಥಿತರಿದ್ದರು.
ಪಟ್ಲ ಫೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಕದ್ರಿ ನವನೀತ್ ಶೆಟ್ಟಿ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ದಾನಿಗಳು ಮೇಳಕ್ಕೆ ಕೊಡುಗೆಯಾಗಿ ನೀಡಿದ ದೇವರ ಬೆಳ್ಳಿಯ ಪ್ರಭಾವಳಿ ,ಶ್ರೀದೇವಿಯ ಉಯ್ಯಾಲೆ ಕಿರೀಟ, ಚಕ್ರ, ಗದೆ, ಹಾಗೂ ಇನ್ನಿತರ ವಸ್ತುಗಳನ್ನು ಭವ್ಯ ಮೆರವಣಿಗೆ ಮೂಲಕ ಶ್ರೀ ಜ್ಞಾನಶಕ್ತಿ ದೇವಸ್ಥಾನದಿಂದ ಚೌಕಿ ವರೆಗೆ ತಂದು ದೇವರಿಗೆ ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನ ತೆಂಕು ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಆರಾಧನೆ ನಡೆಯಿತು. ಸಭಾಕಾರ್ಯಕ್ರಮದ ಬಳಿಕ ಸಂಜೆ ನೂತನ ಮೇಳದಿಂದ ಸೇವಾ ಬಯಲಾಟವಾಗಿ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ನಡೆಯಿತು.