ಸ್ವರ್ಣಾರಾಧನಾ ಅಭಿಯಾನದ ಪ್ರಯುಕ್ತ ಸ್ವಚ್ಛ ಭಾರತ್ ಫ್ರೆಂಡ್ಸ್, ಯುವ ವಿಚಾರ ವೇದಿಕೆ ಉಪ್ಪೂರು ಜಂಟಿ ಆಶ್ರಯದಲ್ಲಿ ಕೀಳಂಜೆ ಮಹಾವಿಷ್ಣು ಮಹೇಶ್ವರ ದೇವಾಲಯದ ವಠಾರದಲ್ಲಿ ಇಂದು ಸ್ವಚ್ಛತಾ ಅಭಿಯಾನ ನಡೆಯಿತು.
ಎರಡು ಗಂಟೆಗಳ ಕಾಲ ನಡೆದ ಸ್ವಚ್ಚತಾ ಅಭಿಯಾನದಲ್ಲಿ ದೇವಸ್ಥಾನದ ಒಳ ಮತ್ತು ಹೊರ ಆವರಣದಲ್ಲಿ ಮತ್ತು ಪುಷ್ಕರಣಿಯನ್ನು ಶುಚಿಗೊಳಿಸಲಾಯಿತು. ಅಭಿಯಾನ ನಡೆಯುತ್ತಿರುವ ಸಮಯದಲ್ಲಿ ವರುಣನ ಆಗಮನವಾಯಿತು. ಬಳಿಕ ಸಾಮೂಹಿಕ ಪ್ರಾರ್ಥನೆ ಮತ್ತು ವಿಶೇಷ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮುಖ್ಯ ಪ್ರಬಂಧಕ ಪ್ರಭಾಕರ ಭಟ್, ವೇದಮೂರ್ತಿ ರವೀಂದ್ರ ಭಟ್, ಡಾ. ಶಿವಾನಂದ ನಾಯಕ್, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್, ಸಂಯೋಜಕ ರಾಘವೇಂದ್ರ ಪ್ರಭು, ಜಗದೀಶ್ ಶೆಟ್ಟಿ, ನ್ಯಾಯವಾದಿ ರಫೀಕ್ ಖಾನ್, ನಾಗರಾಜ್ ಭಂಡಾರ್ಕರ್, ಪುಷ್ಕರ್ ಭಟ್, ಯುವ ವಿಚಾರ ವೇದಿಕೆ ಅಧ್ಯಕ್ಷ ದಿನೇಶ್ ಶೆಟ್ಟಿ, ಕಾರ್ಯದರ್ಶಿ ಸುಕೇಶ, ಯೋಗೀಶ್ ಕೊಳಲಗಿರಿ, ಸದಾಶಿವ್, ಅಶೋಕ್, ರವೀಂದ್ರ, ಸುಬ್ರಹ್ಮಣ್ಯ ಆಚಾರ್ಯ, ಶಶಿಕುಮಾರ್, ಶೋಭಾ ಯೋಗೀಶ್, ಸಂದೀಪ್ ಶೆಟ್ಟಿ, ಸುಕನ್ಯಾ, ಕಾವ್ಯ, ಹೇಮಂತ್, ಅವಿನಾಶ್, ವೈಭವ್, ನಾಗರಾಜ್, ಶಾಂತ, ದಾಮೋದರ ನಾಯ್ಕ್ ಮಣಿಪಾಲ, ಮುಂತಾದವರು ಉಪಸ್ಥಿತರಿದ್ದರು.