ಇನ್ನಂಜೆ : ನೆರವಿನ ನಿರೀಕ್ಷೆಯಲ್ಲಿ ರಾಘವೇಂದ್ರ ಶೆಟ್ಟಿ ಕುಟುಂಬ
Posted On:
05-12-2020 09:28AM
ಇನ್ನಂಜೆ ಮಂಡೇಡಿ ಮೂಡು ಮೇಲ್ಮನೆ ಕಿಟ್ಟಿ ಶೆಟ್ಟಿಯ ಮಗನಾದ ರಾಘವೇಂದ್ರ ಶೆಟ್ಟಿ (ರಾಘು) ಕಳೆದ ಹದಿನೈದು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮುಂಬೈಯಲ್ಲಿ ದುಡಿಯುತ್ತಿದ್ದರು. ಕಳೆದ ಒಂದು ವರ್ಷದಿಂದ ತನ್ನ ಮಗುವಿನ ಅನಾರೋಗ್ಯ ಕಾರಣದಿಂದಾಗಿ ಊರಿನಲ್ಲಿ ಇದ್ದು ಮಗುವಿನ ಆರೋಗ್ಯ ಸುಧಾರಣೆಗಾಗಿ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಇವರ ದುರಾದೃಷ್ಟವೆಂಬಂತೆ ಈಗ ರಾಘವೇಂದ್ರ ಶೆಟ್ಟಿಯವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಅನ್ನನಾಳದಲ್ಲಿ ಗೆಡ್ಡೆಯಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು ಆರು ಲಕ್ಷದವರೆಗೆ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಈ ಕಾರಣದಿಂದ ಈ ಕುಟುಂಬವು ಕಂಗಾಲಾಗಿದೆ.
ಒಂದೆಡೆ ಮಗುವಿನ ಚಿಕಿತ್ಸಾ ವೆಚ್ಚ ಮತ್ತೊಂದೆಡೆ ರಾಘವೇಂದ್ರ ಶೆಟ್ಟಿಯವರ ಚಿಕಿತ್ಸಾ ವೆಚ್ಚಕ್ಕೆ ಖರ್ಚು ಮಾಡಬೇಕಾಗಿದೆ.
ಸಹೃದಯಿ ದಾನಿಗಳು ಈ ಕುಟುಂಬಕ್ಕೆ ನೆರವಾಗಬೇಕೆಂದು ವಿನಂತಿಸಿದ್ದಾರೆ.
ವಿಳಾಸ: ರಾಘವೇಂದ್ರ ಎಮ್. ಶೆಟ್ಟಿ
S/O ಮೋನಪ್ಪ ಶೆಟ್ಟಿ
ಕೆನರಾ ಬ್ಯಾಂಕ್ ಖಾತೆ ಸಂಖ್ಯೆ : 0636101016370
IFSC Code : CNRB0000636
ಶಂಕರಪುರ ಶಾಖೆ ಉಡುಪಿ ಜಿಲ್ಲೆ, ಕಾಪು ತಾಲೂಕು
MOb. NO : 7715951795