ಕಾಪು :(06/12/2020)ಕುಲಾಲ ಸಂಘ (ರಿ) ಕಾಪು ವಲಯದ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಸಂದೀಪ್ ಬಂಗೇರ ಮಾತನಾಡಿ ಕುಲಾಲ ಸಮುದಾಯವನ್ನು ರಾಜಕೀಯವಾಗಿ ಬಳಸಿ ನಮ್ಮ ಸತತ ಮನವಿಗೆ ರಾಜಕೀಯ ಪಕ್ಷಗಳು ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಕಾಪು ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಲಾಲ್, ಕೋಶಧಿಕಾರಿ ಯೋಗೀಶ್ ಕುಲಾಲ್ ಉಳ್ಳೂರು, ಸಂಘದ ಮಾಜಿ ಅಧ್ಯಕ್ಷರು ರಾಜೇಶ್ ಕುಲಾಲ್ ಬೊಬ್ಬೆಟ್ಟು, ಮಹಿಳಾ ಘಟಕದ ಅಧ್ಯಕ್ಷರು ಗೀತಾ ಕುಲಾಲ್ ಶಿರ್ವ, ಕಾರ್ಯದರ್ಶಿ ಸುಮಲತಾ ಇನ್ನಂಜೆ ಸಂಘದ ಸಕ್ರಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು..