ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನೀಲಾವರ ಗೋಶಾಲೆಗೆ ಬೈಹುಲ್ಲು ಸಮರ್ಪಣೆ

Posted On: 07-12-2020 05:59PM

ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಶಿರ್ವ ವಲಯ ಇವರ ವತಿಯಿಂದ ಗೋಶಾಲೆಗಾಗಿ ಬೈಹುಲ್ಲು ಸಂಗ್ರಹ ಅಭಿಯಾನವನ್ನು ಒಂದು ವಾರ ನಡೆಸಿ ಸುಮಾರು 325 ಕಟ್ಟು ಬೈಹುಲ್ಲನ್ನು ಸಂಗ್ರಹಿಸಿ ನೀಲಾವರ ಗೋಶಾಲೆಗೆ ಸಾಗಿಸಲು ಹಿರಿಯ ಹಿಂದೂ ನೇತಾರರಾದ ಬೆಳ್ಳೆಅಂಗಡಿ ಸದಾನಂದ ಶೆಣೈ ಹಾಗೂ ವಿಶ್ವಹಿಂದು ಪರಿಷದ್ ಶಿರ್ವ ವಲಯದ ಗೌರವಾಧ್ಯಕ್ಷರಾದ ಬೆಳ್ಳೆ ಮಧ್ವರಾಜ ಭಟ್ ಬೆಳ್ಳೆ ಚಾಲನೆ ನೀಡಿದರು.

ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ,ಸೂರ್ಯೋದಯದಲ್ಲಿ ಎದ್ದು ಪ್ರತಿಯೊಬ್ಬ ಹಿಂದೂ 8 ಶುಭ ವಸ್ತುಗಳನ್ನು ದರ್ಶನ ಮಾಡಬೇಕು, ಅದರಲ್ಲಿ ಮೊದಲಿಗೆ ಗೋವಿನ ದರ್ಶನ ಮಾಡಬೇಕೆಂದು ಶಾಸ್ತ್ರ ತಿಳಿಸಿರುತ್ತದೆ.ಪ್ರಸ್ತುತ ಹೆಚ್ಚಿನವರು 3 ರಿಂದ 10 ಸೆಂಟ್ಸ್ ಜಾಗದಲ್ಲಿ ಮನೆಕಟ್ಟಿ ವಾಸ್ತವ್ಯವಿರುವುದರಿದ ಪ್ರತಿ ಮನೆಯವರು ಗೋವುಗಳನ್ನು ಸಾಕಲು ದರ್ಶನ ಮಾಡಲು ಕಷ್ಟಸಾಧ್ಯ.ಹಿಂದುವಾದವನು ಗೋಸೇವೆ ಮಾಡಲೇಬೇಕು ಸಾಕಲು ಆಗದಿದ್ದರೂ ಸಾಕುವವರಿಗೆ ಪ್ರೋತ್ಸಾಹ ನೀಡುವುದು,ಗೋಗ್ರಾಸ ನೀಡುವುದು ಮಾಡಬಹುದು.ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನೀಲಾವರದಲ್ಲಿ ಸಾವಿರಾರು ಅನಾಥ ಗೋವುಗಳನ್ನು ಸಾಕಾಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ.ಅವರೊಂದಿಗೆ ನಾವು ಕೈಜೋಡಿಸಿ ಅಳಿಲುಸೇವೆ ಮಾಡುವುದು ನಮಗೆ ಸಿಕ್ಕಿರುವ ದೊಡ್ಡ ಅವಕಾಶ ಇದನ್ನು ಸದುಪಯೋಗ ಮಾಡಿಕೊಂಡು ನಿರಂತರವಾಗಿ ಸಮಾಜಕ್ಕಾಗಿ ಗೋವಿಗಾಗಿ ಇಂಥ ಕೆಲಸಗಳನ್ನು ಮಾಡಲು ನಮ್ಮನ್ನು ತೊಡಿಗಿಸಿಕೊಳ್ಳೋಣ ಎಂದು ಬೆಳ್ಳೆ ಮಧ್ವರಾಜ ಭಟ್ ತಿಳಿಸಿದರು.

ಅವಿನಾಶ ಆಚಾರ್ಯ ಸ್ವಾಗತಿಸಿ ವಿಶ್ವಹಿಂದು ಪರಿಷದ್ ಶಿರ್ವ ವಲಯದ ಅಧ್ಯಕ್ಷರಾದ ಬೆಳ್ಳೆ ವಿಶ್ವನಾಥ ಶೆಟ್ಟಿ ಧನ್ಯವಾದ ನೀಡಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ್ ಕಾಪು ಪ್ರಖಂಡದ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು,ಧರ್ಮಪ್ರಚಾರ ಪ್ರಮುಖ್ ರಾಘವೇಂದ್ರ ಶೆಟ್ಟಿ, ಸುರಕ್ಷಾ ಪ್ರಮುಖ್ ಆನಂದ, ವಿಶ್ವಹಿಂದು ಪರಿಷದ್ ಶಿರ್ವ ವಲಯದ ಗೌರವಾಧ್ಯಕ್ಷರಾದ ನಾಗರಾಜ ಭಟ್, ಶಿರ್ವ ವಲಯದ ಗೌರವಾಧ್ಯಕ್ಷರಾದ ನಾಗರಾಜ ಭಟ್,ರಾಷ್ಟ್ರಿಯ ಸ್ವಯಂ ಸೇವಾ ಸಂಘದ ಸೇವಾ ಪ್ರಮುಖ್ ಸುಬ್ರಹ್ಮಣ್ಯ ವಾಗ್ಲೆ, ಹಾಗೂ ಊರಿನ ಹಿರಿಯರಾದ ಪಟೇಲ್ ಮನೆ ದಯಾನಂದ ಶೆಟ್ಟಿ,ಭಟ್ರ ಮನೆ ಪುಂಡರೀಕಾಕ್ಷ ಭಟ್, ದೊಡ್ಡಮನೆ ಅಶೋಕ ಶೆಟ್ಟಿ,ಮತ್ತು ವಿಶ್ವಹಿಂದು ಪರಿಷದ್ ಬಜರಂಗದಳ ಮಟ್ಟಾರು, ಮೂಡುಬೆಳ್ಳೆ, ಬಂಟಕಲ್ಲು,ಎಡ್ಮೇರು,ವಿಷ್ಣುಮೂರ್ತಿ ಶಿರ್ವ,ಪಡುಬೆಳ್ಳೆ ಘಟಕದ ಅಧ್ಯಕ್ಷರು,ಗೋರಕ್ಷಾ ಪ್ರಮುಖ್,ಇನ್ನಿತರ ಪ್ರಮುಖರು,ಕಾರ್ಯಕರ್ತರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.