ಶಿರ್ವ (ಕುತ್ಯಾರು) : ಪೈಪ್ ಅಳವಡಿಕೆಗೆ ರಸ್ತೆಯನ್ನು ಅಗೆದು ಹೊಂಡವಾಗಿ ತಿಂಗಳು ಕಳೆದರೂ ಅದನ್ನು ಮುಚ್ಚದೆ ವಾಹನ ಸವಾರರಿಗೆ ತೊಂದರೆಯಾಗಿ ಸಣ್ಣ ಪುಟ್ಟ ಅಪಘಾತಗಳಾಗುತ್ತಿರುವ ಸನ್ನಿವೇಶ ಮುದರಂಗಡಿ- ಶಿರ್ವ ಮುಖ್ಯ ರಸ್ತೆಯ ಕುತ್ಯಾರು ಬ್ಯಾಂಕ್ ಆಫ್ ಬರೋಡದ ಬಳಿ ಕಾಣಬಹುದಾಗಿದೆ.
ರಾತ್ರಿ ವೇಳೆ ಹೊಂಡ ಗೋಚರಿಸದೆ ತೊಂದರೆಯಾಗುತ್ತಿದೆ. ಇನ್ನೊಂದೆಡೆ ರಸ್ತೆಯ ಇಕ್ಕೆಲಗಳಲ್ಲಿ ಡಾಮರೀಕರಣಕ್ಕಾಗಿ ಜಲ್ಲಿಯನ್ನು ಹಾಕಲಾಗಿದ್ದು ಇತ್ತ ಡಾಮರೀಕರಣವೂ ಆಗದೆ ಪರಿಸರವು ಧೂಳುಮಯವಾಗಿದೆ ಸಂಬಂಧಪಟ್ಟವರು ಇದರ ಬಗ್ಗೆ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕೆಂದು ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್ ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸಂಪತ್ ಕುಮಾರ್ ಕೇಂಜ ಆಗ್ರಹಿಸಿದ್ದಾರೆ.