ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕ್ರಿಸ್ಮಸ್ ವೃಕ್ಷದೊಂದಿಗೆ ಸೆಲ್ಫಿ : ಫೊಟೋ ಸ್ಪರ್ಧೆ

Posted On: 08-12-2020 04:32PM

ಕಾಪು : ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕುರ್ಕಾಲು ಯುವಕ ಮಂಡಲದಿಂದ ಕ್ರಿಸ್ಮಸ್ ವೃಕ್ಷದೊಂದಿಗೆ ಸೆಲ್ಫಿ ಫೋಟೋ ಸ್ಪರ್ಧೆಯನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ ₹ 1,000 ಎರಡನೇ ಬಹುಮಾನ ₹750 ಮತ್ತು 3 ಸಮಾಧಾನಕರ ಬಹುಮಾನ ₹500 ಇರಲಿದೆ.

ಸ್ಪರ್ಧೆಯ ನಿಯಮಗಳು ಇಂತಿವೆ : ತಮ್ಮ ಫೋಟೋವನ್ನು ಕೆಳಗೆ ನಮೂದಿಸಿದ ಯಾವುದೇ ಮೊಬೈಲ್ ಸಂಖ್ಯೆಗೆ ವಾಟ್ಸ್ಆಪ್ ಮಾಡಬಹುದು. ಸ್ಪರ್ಧಾಳುಗಳು ತಮ್ಮ ಪೂರ್ಣ ಹೆಸರು,ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. ಸ್ಪರ್ಧಿಯು ಕೇವಲ ಒಂದು ಫೋಟೋವನ್ನು ಮಾತ್ರ ಕಳುಹಿಸಲು ಅವಕಾಶ. ಸ್ಪರ್ಧೆಯಲ್ಲಿ ಭಾಗವಹಿಸುವ ವ್ಯಕ್ತಿಯು ಫೋಟೋದಲ್ಲಿ ಇರಬೇಕು. ಈ ಸ್ಪರ್ಧೆಯು ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿಲ್ಲ. ಎಲ್ಲರಿಗೂ ಮುಕ್ತ ಅವಕಾಶ. ಡಿಸೇಂಬರ್ 24 ರಿಂದ 26 ಸಂಜೆ 6 ಗಂಟೆಯ ಒಳಗೆ ಮಾತ್ರ ಫೋಟೋ ಕಳುಹಿಸಲು ಅವಕಾಶ. ಸ್ಪರ್ಧೆಯಲ್ಲಿ ವಿಶೇಷವಾಗಿ ಕ್ರಿಸ್‌ಮಸ್ ವೃಕ್ಷದ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ನಿಮ್ಮ ಫೋಟೋಗಳನ್ನು ಈ ಕೆಳಗಿನ ಯಾವುದೇ ವಾಟ್ಸಪ್ ನಂಬರಿಗೆ ಕಳುಹಿಸಬಹುದಾಗಿದೆ. ಎಂದು ನಮ್ಮ ಕಾಪು ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ. ರಾಯನ್ ಫೇರ್ನಾಂಡಿಸ್ 7760718898 ಸಂತೋಷ್ ಶೆಟ್ಟಿ 9980970615 ಸುವಿತ್ ಶೆಟ್ಟಿ 8150025768 ಕಿರಣ್ ಪೂಜಾರಿ 9902424715 ಪ್ರಶಾಂತ್ ಪೂಜಾರಿ 9535866383 ಆಕಾಶ್ ಪೂಜಾರಿ 9538016764