ವರ್ಕರ ಗುಂಡಿದ ಮುಗೇರ ಪಂಜುರ್ಲಿ (ದೈವದ ಪ್ರಾದೇಶಿಕ ಪ್ರಸರಣ ಕಥೆ)
Posted On:
10-12-2020 05:14PM
ತೆಂಕಣ ಭಾಗದ ಮೊಗರ್ನಾಡು ಸಾವಿರ ಸೀಮೆಯ ಒಂದು ವಿಶಿಷ್ಟವಾದ ಸತ್ಯ,ನಾಡು ದೈವ ಪಂಜುರ್ಲಿ.
ಈ ಪಂಜುರ್ಲಿಯು ನಾವು ಹೇಳುವ ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ,ಅಣ್ಣಪ್ಪ ಪಂಜುರ್ಲಿಯ ರೂಪ ಸಂದಿ ಪಾರ್ಧನದಲ್ಲಿ ಎಂದು ಗಣನೆಗೆ ತೆಗೆದುಕೊಂಡರೂ,ಮೂಲ ಸುಳ್ಳಮಲೆಯ" ಅರದ್ದೆರೆ ಪಂಜುರ್ಲಿ" ಎಂದೂ, ಸಂಧಿಯಲ್ಲಿ ಈ ದೈವಕ್ಕೆ ಸುಳ್ಳಮಲೆಯೆ ಮೂಲ ಅಗಿದೆ.
ಅರದ್ದರು ಹಾಕಿ ಜಪಂಧ ಕಲ್ಲಿನಲ್ಲಿ ಉದ್ಯ ಉದಿಪನ ಆದ ಈ ಮೂರು ದೈವಗಳು ಇವು ಎಂದು ಸಂಧಿ ಉಲ್ಲೇಖ . ಅ ಮೂರು ದೈವಗಳಲ್ಲಿ "ಅರದ್ದೆರೆ ಪಂಜುರ್ಲಿ"ಯು ಒಂದು. ಒಬ್ಬರು ದೇವರು ವಿಷ್ಣುಮೂರ್ತಿ,ಚಿತ್ತರಿಗೆ ಬೂಡಿನ ಒಬ್ಬರು ಉಲ್ಲಾಲ್ತಿ, ಅರಸು,ಪ್ರಧಾನಿ,ಬಂಟ ಎಂಬ ಮೂವರು ದೈವಂಕ್ಲು.(ಗುಡ್ಡ ಚಾಮುಂಡಿ,ಮುಗೇರ ಪಂಜುರ್ಲಿ,ಮಲೆಕೊರತಿ) ಮೂರುಗ್ರಾಮ,ನಾಲ್ಕು ಮನೆ,ಐವರು ಸತ್ಯಗಳು.ಪೆರಾಜೆ,ಮಾಣಿ,ಅರೆಬೆಟ್ಟು ಎಂಬ ಮೂರು ಗ್ರಾಮಗಳನ್ನು ತನ್ನ ನಿಲೆಗಾಗಿ ಇಟ್ಟುಕೊಂಡ ದೈವಗಳು.ಅದರಲ್ಲಿ ಅರಸು ಗುಡ್ಡ ಚಾಮುಂಡಿ,ಪ್ರಧಾನಿ,ಬಂಟೆದಿ ಎಂಬ ಮೂವರು ದೈವಗಳು.ಅದರಲ್ಲಿ ಪ್ರಧಾನಿ ದೈವ ಮುಗೇರ ಪಂಜುರ್ಲಿ ತುಲುನಾಡಿನಲ್ಲಿ ಅರಾಧನೆ ಗೊಳ್ಳುವ ಪಂಜುರ್ಲಿಯ(ಪ್ರಾಣಿ ಸ್ವರೂಪದ ದೈವ ಅಲ್ಲ) ಒಂದು ಸ್ವರೂಪ. ಅರ್ಥಾತ್ ಸುಳ್ಳಮಲೆತ್ತ ಪಂಜುರ್ಲಿ ಎಂದು ಈ ದೈವವನ್ನು ಕರೆಯುತ್ತಾರೆ.ಇಲ್ಲಿ "ಅರದ್ದೆರ್" ಯಾರು ಎಂಬುದು ಎಲ್ಲಾರಿಗೂ ಜಿಜ್ಞಾಸೆ ಹುಟ್ಟುವುದು ಸಹಜ.ಕೆಲವರ ಪ್ರಕಾರ ಅವರು ಜೈನರು ಆಗಿದ್ದಿರಬಹುದು,ಇಲ್ಲವೇ ಪಾರ್ಷಿಗಳು ಆಗಿದ್ದಿರಬಹುದು ಎಂಬ ಉತ್ತರ ಬರುತ್ತವೆ.
ಆದರೆ ಅವರು ಯಾರೆಂಬುವುದು ಇಲ್ಲಿಯವರೆಗೆ ಸರಿಯಾದ ಉತ್ತರ ಮಾತ್ರ ಶೂನ್ಯ.
ಸುಳ್ಳಮಲೆ ಬಲ್ಲಮಲೆ ಎಂಬುವುದು ಇತಿಹಾಸ ಪ್ರಸಿದ್ಧವಾದ ಐತಿಹಾಸಿಕ ಊರುಗಳು.ಈ ಹೆಸರುಗಳನ್ನು ಅನಾದಿಕಾಲದಿಂದಲೂ ಕೋಟಿ ಚೆನ್ನಯ್ಯರ ಬೀರದಲ್ಲಿ,ಬಲಿಯೆಂದ್ರ ಲೆಪ್ಪುಗಳಲ್ಲಿ"ಸುಳ್ಳಮಲೆ,ಬಲ್ಲಮಲೆ ಒಂಜನಾಗ" ಎಂದು ನಾವು ಕೇಳುತ್ತ ಬಂದಿದ್ದೆವೆ.
ಆದರೆ ಹೆಚ್ಚಿನವರು ಈಗಲೂ ತಿಳಿದಿರುವುದು ಅದೆರಡು ಭಯಂಕರ ಕಾಡುಗಳು ಮತ್ತು ಗುಡ್ಡೆಗಳು ಎಂದು.ಅದು ಒಂದಾಗಲೂ ಸಾದ್ಯವಿಲ್ಲ ಎಂದು.
ಆದರೆ ವಾಸ್ತವವಾಗಿ ಇನ್ನೊಂದು ವಿಚಾರವೇ ಬೇರೆ ಇದೆ.ಎರಡು ವಂಶಗಳು ಆಳ್ವಿಕೆ, ಬಾಳ್ವಿಕೆ ಮಾಡಿದ ಪಟ್ಟಗಳು ಇವು ಎರಡು.ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯವೆಂದರೆ ಇಲ್ಲಿ ಅರಮನೆ,ಬೂಡುಗಳ ಕಾನ್ಸೆಪ್ಟ್ ಇಲ್ಲಿ ಇಲ್ಲ.ಹಾಗೂ ಎರಡು ವಂಶಗಳಿಗೆ ಯಾವುದೇ ವಿಚಾರದಲ್ಲೂ ಕೂಡಿ ಬರುತ್ತಿರಲಿಲ್ಲ ಅನ್ನೊದು ಮಾತ್ರ ಸತ್ಯ.
ಅದಕ್ಕಾಗಿ ಪ್ರಕೃತಿ ನಿಯಮದಲ್ಲಿ ಈ ಎರಡು ಗುಡ್ಡೆಗಳು ಮತ್ತು ಕಾಡುಗಳದ ಸುಳ್ಳಮಲೆ ಬಲ್ಲಮಲೆ ಯಾವತ್ತಿಗೂ ಒಂದಾಗಲೂ ಸಾದ್ಯವಿಲ್ಲ,ಹಾಗೂ ಎರಡು ವಂಶಗಳ ಭಿನ್ನಾಭಿಪ್ರಾಯದ ವಿಚಾರದಲ್ಲೂ ಒಂದಾಗಿ ಬೆಸೆಯಲು ಸಾದ್ಯವಿಲ್ಲ ಎಂಬ ಅರ್ಥ.
(ಮಾಹಿತಿ:-ಶಾಶಂಕ್ ನೆಲ್ಲಿತ್ತಾಯ) ಮುಗೇರ ಸಾವಿರ ಸೀಮೆಯಲ್ಲಿ (ಮೊಗರ್ನಾಡು)ಅರಸು ದೈವ ಗುಡ್ಡ ಚಾಮುಂಡಿಗೆ ಪ್ರಧಾನಿಯಾಗಿ ಆರಾಧನೆಗೊಂಡ ಪಂಜುರ್ಲಿ ಮೊಗರ್ನಾಡಿನಿಂದ ಕಡೆಶೀವಾಲಯಕ್ಕೆ ಪ್ರಸರಣೆಗೊಂಡು ಅಲ್ಲಿ ದೇವರ ಉಚ್ಚಯ ಅಗುವಾಗ ದೇವರ ಬಲಿಗೆ ಅಡ್ಡ ನಿಲ್ಲುತ್ತದೆ,ಊರಿನ ಪ್ರಮುಖರು ಪ್ರಶ್ನಾ ಚಿಂತನೆ ಇಟ್ಟಾಗ ದೈವ ಪ್ರಶ್ನಾ ಚಿಂತನೆಗೆ ಸಿಗುವುದಿಲ್ಲ,ಅನಂತರ ನೀಲೇಶ್ವರ ತಂತ್ರಿಯ ಅಷ್ಟಮಂಗಲ ಪ್ರಶ್ನೆಯಲ್ಲಿ ಮೊಗರ ಸಾವಿರ ಸೀಮೆಯ ದೈವ ಪಂಜುರ್ಲಿ ದೈವ ಬಂದಿರುವ ವಿಚಾರ ತಿಳಿಯುತ್ತೆ.ಅಲ್ಲಿ ದೇವರ ಬಲಭಾಗದಲ್ಲಿ ಅರಾಧನೆ ಬೇಕು ಅಂದಾಗ,ದೇವರ ಒಪ್ಪಿಗೆ ಮೇರೆಗೆ ನದಿಯ ಅಕಡೆ ಬದುವಿನ ಕೂಟೆಲು ಎಂಬಲ್ಲಿ ಎಂಟು ಗುತ್ತು,ನಾಲ್ಕು ಬರ್ಕೆ,ನಾಲ್ಕು ಮನೆ ಸೇರಿ ಐದು ದಿನದ ನೇಮ ನೆರಿ ತಂಬಿಲ ಅಗುವ ಮುಖಾಂತರ ಅಲ್ಲಿ ನೆಲೆಯಾಗುತ್ತದೆ.ಅಲ್ಲಿಂದ ಮತ್ತೆ ಬೇರೆ ಬೇರೆ ಕಡೆಗೆ ದೈವ ಪ್ರಸರಣೆ ಆಗಿ, ತಿಂಗಳಾಡಿ ಗುತ್ತು ಅಲ್ಲಿಂದ ಬಡಗ ಕಜೆಕಾರಿನ ಅಂಬುಡೆಲು ಗುತ್ತಿಗೆ ದಂಡು ದೇವು ಬೈದ್ಯನ ಕಾಲದಲ್ಲಿ ಬಂದು ಕಪಿಲೆ ದನವನ್ನು ಮಾಯ ಮಾಡಿ ಕಾರ್ನಿಕ ಮೆರೆದು "ಪಟ್ಟದ ಪಂಜುರ್ಲಿ" ಎಂಬ ಹೆಸರಿನೊಂದಿಗೆ ಬಿರುಧವಳಿಗಳೊಂದಿಗೆ ನೇಮ ನೆರಿ ಪಡೆದು ನೆಲೆಯಾಗುತ್ತದೆ.ಹೀಗೆ ಹಲವಾರು ಕಡೆ ಪ್ರಸರಣೆ ಆದ ಪಂಜುರ್ಲಿ ದೈವ ನಮ್ಮ ಮೂಡಾಣ ಕಡೆ ನಮ್ಮ ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯ "ಬಂಡಾಡಿ ಅಜಿ ಮಾಗಣೆ" ಎಂಬ ಅನಾದಿಯ ಹೆಸರಿನ ಹಿರೇ ಬಂಡಾಡಿ ಗ್ರಾಮದ ಉದ್ದಮಜಲು ಸ್ಥಳಕ್ಕೆ ಬಂದು, ಬೊಂಟ್ರಪಾಲು ಧರ್ಮಚಾವಡಿಗೆ ಚಾವಡಿಗೆ ದೈವ ಬರುತ್ತದೆ. ಇದನ್ನು ಹಿಂದೆ ದೈವ ಕಟ್ಟುತ್ತಿದ್ದ ಅಡೆಕ್ಕಲ್ಲಿನ ದಿವಂಗತ ಕಾಂತು ನಲಿಕೆಯವರು ಸಂದಿ ಪಾರ್ದನದಲ್ಲಿ ಹೇಳುತ್ತಿದ್ದರಂತೆ. ಸುಳ್ಳಮಲೆ ಪಟ್ಟದಲ್ಲಿ ಸೂರ್ಯ ಬಾರಿ ಅರದ್ದರು,ಬಲ್ಲಮಲೆ ಮಲೆ ಪಟ್ಟದಲ್ಲಿ ಬೈರಸಿಂಗತ್ತ ಬಲ್ಲಾಳರ ಕಾಲದಲ್ಲಿ ಪಂಜುರ್ಲಿಯೂ ಬೊಂಟ್ರಪಾಲು ಧರ್ಮಚಾವಡಿಗೆ ನುಗ್ಗಿ,ಉದ್ದಮಜಲು ಗ್ರಾಮದೈವ ಶಿರಾಡಿ ದೈವಯೊಂದಿಗೆ ಅರಾಧನೆ ಪಡೆದ ದೈವ.
ಇಲ್ಲಿ ಇನ್ನೊಂದು ವಿಶೇಷವೆಂದರೆ ಬೊಂಟ್ರಪಾಲಿನ ಧರ್ಮ ಚಾವಡಿಗಿಂತಲೂ ಅಲ್ಲಿರುವ ವೊರ್ಕರ ದಂಡು(ನೀರಿನ ವೊಸರಿನ ದಂಡು ಬರುವ) ಇರುವ ಪಾದೆಕಲ್ಲಿನಲ್ಲಿ ಆರಾಧನೆ ಪಡೆದದ್ದು ವಿಶೇಷ .ಈ ದೈವಕ್ಕೆ ಇಲ್ಲಿ ಯಾವುದೇ ಆಯುಧ ಮೂರ್ತಿ ಇಲ್ಲ.ಖಾಲಿ ಪಾದೆಯ ಮೇಲೆ ಆರಾಧನೆ ಮಾತ್ರ.
ಉದ್ದಮಜಲಿನಲ್ಲಿ ಶಿರಾಡಿ ದೈವದ ಸೆರಿಗೆಯ ದೈವ ಅದುದರಿಂದ ವಿಜ್ರಂಭಣೆಯ ನೇಮ ಅಗುವಾಗಲೂ ಕೂಡ ಶಿರಾಡಿ ದೈವದ ಕಡ್ಸಲೆ ಮಣಿಯನ್ನು ಈ ದೈವ ಹಿಡಿಯುವುದು. ಹಾಳೆಯ ಮೊಗ ಮುಖಕ್ಕೆ ಕಟ್ಟುವುದು. "ಸುಳ್ಳಮಲೆರ್ದ್ ಬತ್ತುದು ಬೊಂಟ್ರಪಾಲುದ ಧರ್ಮಚಾವಡಿಗ್ ಪೊಗ್ಗುದು,ವೊರ್ಕರ ಗುಂಡಿದ ಪಾದೆ ಪತ್ತುದ್ ಕುಲ್ಲಿನ ಮುಗೇರ ಸಾರ ಸೀಮೆದ ದೈವ ಯಾನ್ "ಮುಗೇರ ಪಂಜುರ್ಲಿ" ಅಂತ ನುಡಿಯಲ್ಲಿ ಹೇಳುತ್ತದೆ.
ಮತ್ತೊಂದು ವಿಚಾರ ಅಂದ್ರೆ ಬೆನ್ನೆತ್ತಿಮಾರು ಎಂಬ ಗದ್ದೆ ಇದೆ.ದೈವ ಅಕಾಲದಲ್ಲಿ ನಡೆದುಕೊಂಡು ಬಂದಾಗ ಬೆನ್ನೆಂತಿಮಾರು ಗದ್ದೆಯಲ್ಲಿ ಕಾಲಿಗೆ ಕಾವೇರ ಸಂಕ್ರಮಣಕ್ಕೆ ಕಂಡಕ್ಕೆ ಇಟ್ಟ ಕಾಪು ಕಾಯರಿನ(ಕಾಸರ್ಕ ಮರ)ನಂಜು ಮುಳ್ಳು ಚುಚ್ಚುತ್ತದೆ. ಅಲ್ಲಿಂದ ಕುಂಟುತ್ತ ಬಂದು ಉದ್ದಮಜಲಿನ ಗದ್ದೆಯಲ್ಲಿ ನಡೆದುಕೊಂಡು ಬಂದಾಗ ಕಾಲಿನ ಗಾಯ ಉಲ್ಬಣಿಸಿ ಅದರಲ್ಲಿ ಹುಳ ಅಗುತ್ತೆ.ಅದನ್ನು ಇನ್ನೊಂದು ಗದ್ದೆಯಲ್ಲಿ ಕಾಲನ್ನು ಒದಡಿ ಹುಳವನ್ನು ಹಾಕುತ್ತದೆ. ಅ ಹೊತ್ತಲ್ಲಿ ಅಳುತ್ತ ಬೊಬ್ಬೆಯೊಡೆಯುತ್ತ ದೈವ ಕುಂಟುತ್ತ ಬಂದು ಬೊಂಟ್ರಪಾಲು ಮುದರನಲ್ಲಿ ಮದ್ದು ಕೇಳುತ್ತದೆ. ಇದರ ಪ್ರತೀತಿಯನ್ನು ಈಗಲೂ ನೇಮದಲ್ಲಿ ಕಾಲಿಗೆ ಹೊದಳು(ಅರಳು) ಕಟ್ಟಿ, ಮುಖಕ್ಕೆ ಹಾಳೆಯ ಮೊಗ ಇಟ್ಟು,ಕಾಲು ಕುಂಟುತ್ತ ಅ ಕಡೆ ಈ ಕಡೆ ಹೋಗಿ " ವೊ ಮುದರ ಮರ್ದ್ ಕೊಂಡ" ಎಂದು ಬೊಬ್ಬೆ ಇಡುತ್ತದೆ ದೈವ.ಅವಾಗ ಬೊಂಟ್ರಪಾಲು ಮನೆಯವರು ಅಲ್ಲಿ ಒಂದು ಮಡಲಿನ ತೂಟೆ,ಒಂದು ಕುಪ್ಪಿ ಕಲಿ ಹಿಡಿದು ನಿಂತಿರಬೇಕು. ಈ ರೀತಿ ಸಾಗುತ್ತೆ ಈ ದೈವದ ಕಥೆ.(ಮಾಹಿತಿ:-ವಿನೋದ್ ಬೊಂಟ್ರಪಾಲು)
ಉದ್ದಮಜಲು ಗದ್ದೆಗೆ ಈಗಲೂ ಜನರು ಗಾಯವಾದ ಕಾಲಿಗೆ ಬಟ್ಟೆ ಕಟ್ಟಿ ಇಳಿಯಬಾರದು.ಇಳಿದರೆ ಗಾಯ ಉಲ್ಬಣಿಸುತ್ತ ಹೋಗುತ್ತದೆ. ಹಾಗೆಯೇ ವೊರ್ಕರಗುಂಡಿ ಪಾದೆಕಲ್ಲಿನ ಮೇಲೆ ಇರುವ ದೈವಕ್ಕೆ ಹಿಂದೆ ಊರಿನವರು ದನ,ಎತ್ತು,ಜಾನುವಾರುಗಳಿಗೆ ಕಾಲಿನಲ್ಲಿ (ಅವಡ್) ಗಾಯ ಅಗಿ ಉಲ್ಬಣಿಸಿ ಹುಳ ಅದ್ರೆ ಇಲ್ಲಿಯ ವೊರ್ಕರ ಗುಂಡಿಯ ಪಂಜುರ್ಲಿಗೆ ತಂಬಿಲದ ಹರಕೆ ಹೊರುತ್ತಿದ್ದರಂತೆ.ಆದ್ರೆ ತಂಬಿಲದಲ್ಲಿ ಈ ದೈವಕ್ಕೆ ಕೋಳಿ ಬಲಿ ಇಲ್ಲದಿರುವುದು ಒಂದು ವಿಶೇಷ.ಏನೆ ಆಗಲಿ ತುಲುನಾಡಿನ ದೈವರಾಧನೆ ಬಲು ವಿಶಿಷ್ಟ ಅನ್ನೊದು ಮಾತ್ರ ಸತ್ಯ.
ಲೇಖನ : ಚಂದು