ಕಾಂತಾವರ ಕನ್ನಡ ಸಂಘ: ಕೆ.ಪಿ.ರಾವ್, ಕುಂಡಂತಾಯ, ಖಂಡಿಗೆ, ಮುರಲಿ ಅವರಿಗೆ ಪ್ರಶಸ್ತಿ ಪ್ರದಾನ
Posted On:
14-12-2020 10:14AM
ಕಾಂತಾವರ ಕನ್ನಡ ಸಂಘದ 2020 ನೇ ಸಾಲಿನ ದತ್ತಿನಿಧಿಗಳ ಪ್ರಶಸ್ತಿ ಪ್ರಧಾನ ಸಮಾರಂಭವು ಡಿ.13 ರಂದು ಕಾಂತಾವರದ ಕನ್ನಡ ಸಂಘದಲ್ಲಿ ನೆರವೇರಿತು . ಕ.ಸಾ.ಪ .ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿದ್ದರು .ಕಾಂತಾವರ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ. ನಾ.ಮೊಗಸಾಲೆ ಉಪಸ್ಥಿತರಿದ್ದರು.
ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. 'ಜಿನರಾಜ ಹೆಗ್ಡೆ ಸ್ಮಾರಕ ಪ್ರಶಸ್ತಿ'ಯನ್ನು 'ಭಾರತೀಯ ಭಾಷಾ ಗಣಕ ಪಿತಾಮಹ' ನಾಡೋಜ ಕೆ.ಪಿ.ರಾವ್ ಅವರಿಗೆ . ಭಾಷಾ ವಿಜ್ಞಾನಿ ಡಾ.ಯು.ಪಿ .ಉಪಾಧ್ಯಾಯರ ದತ್ತಿನಿಧಿಯ 'ಸಂಶೋಧನಾ ಮಹೋಪಾಧ್ಯಾಯ ಪ್ರಶಸ್ತಿ'ಯನ್ನು ವಿದ್ವಾಂಸ , ಚಿಂತಕ ಕೆ.ಎಲ್.ಕುಂಡಂತಾಯ ಅವರಿಗೆ .ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಂಪತಿ ಕಾಂತಾವರ ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ಇವರ ದತ್ತಿನಿಧಿಯ 'ಕಾಂತಾವರ ಪ್ರಶಸ್ತಿ'ಯನ್ನು ಸಾಹಿತಿ,ಚಿಂತಕ ಟಿ.ಎ.ಎನ್. ಖಂಡಿಗೆ ಅವರಿಗೆ . ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಂಪತಿ ದಿವಂಗತ ಕೆ.ಬಾಲಕೃಷ್ಣ ಆಚಾರ್ಯ ಮತ್ತು ವಾಣಿ ಬಿ. ಆಚಾರ್ಯ ಅವರ ದತ್ತಿನಿಧಿಯಿಂದ 'ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ'ಯನ್ನು ಅಪರೂಪದ ನಿವೃತ್ತ ಶಿಕ್ಷಕ ಮುರಳಿ ಕಡೆಕಾರ್ ,ಉಡುಪಿ ಅವರಿಗೆ ಪ್ರದಾನಿಸಲಾಯಿತು .
ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ನಿರಂಜನ ಮೊಗಸಾಲೆ, ಪ್ರ.ಕಾರ್ಯದರ್ಶಿ ಸದಾನಂದ ನಾರಾವಿ, ಸಂಚಾಲಕ ವಿಠಲ ಬೇಲಾಡಿ, ಉಪಾಧ್ಯಕ್ಷ ಸತೀಶ ಕುಮಾರ್ ಕೆಮ್ಮಣ್ಣು ಅವರು ಉಪಸ್ಥಿತರಿದ್ದರು .