ಸಮಾಜಕ್ಕೆ ಮಾದರಿಯಾಗಿರುವ ಮಾಧವರಿಗೆ ಗೌರವ
Posted On:
23-12-2020 10:20PM
ಉಡುಪಿ : ಪೋಲಿಯೋ ಪಿಡಿತರಾಗಿ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡರೂ ಎದೆಗುಂದದೆ ಕಳೆದ 34 ವಷ೯ಗಳಿಂದ ಕೊರಂಗ್ರಪಾಡಿಯಲ್ಲಿ ಸೈಕಲ್ ರಿಪೇರಿ ಅಂಗಡಿ ನಡೆಸಿಕೊಂಡು ಮಾದರಿಯಾಗಿ ಜೀವನ ಸಾಗಿಸುತ್ತಿರುವ ಮಾಧವ ಕಾಂಚನ್ ರವರಿಗೆ ಸಕ್ಷಮ ಉಡುಪಿ ವತಿಯಿಂದ ವಿಶ್ವ ವಿಶೇಷ ಚೇತನರ ದಿನದ ಗೌರವ ಸಲ್ಲಿಸಲಾಯಿತು.
ಡಿ.23ರಂದು ಅವರ ಸೈಕಲ್ ಅಂಗಡಿಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಮಾತನಾಡಿದ ಸಮಾಜ ಸೇವಕ ವಿಶ್ವ ಸಂಸ್ಕೃತಿ ಪ್ರತಿಷ್ಟಾನದ ಗೌರವ ಅಧ್ಯಕ್ಷ ವಿಶ್ವನಾಥ್ ಶೆಣ್ಯ್ ಶ್ರೀಯುತರು ಪೋಲಿಯೋ ಪಿಡಿತರಾಗಿ ಕಾಲಿನ ಸ್ವಾಧೀನ ಕಳೆದುಕೊಂಡರೂ ಯಾರಿಗೂ ಭಾರವಾಗದೆ ಮಾದರಿಯಾದ ಜೀವನ ಸಾಗಿಸುತ್ತಿದ್ದಾರೆ.ಸಮಾಜದಲ್ಲಿ ಎಲ್ಲವೂ ಇದ್ದು ಕೆಲಸ ಮಾಡಿದೆ ಜೀವನ ದೂಡುವ ಜನರು ಇವರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದರು.
ಕಾಯ೯ಕ್ರಮದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಪಾಂಡುರಂಗ ಶ್ಯಾನುಭಾಗ್, ಸ್ಪಂದನ ವಿಶೇಷ ಶಾಲೆಯ ಪ್ರಾಂಶುಪಾಲ ಜನಾಧ೯ನ್, ಸಕ್ಷಮಾ ಅಧ್ಯಕ್ಷೆ ಲತಾ ಭಟ್, ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು, ಸ್ಥಳೀಯರು ಉಪಸ್ಥಿತರಿದ್ದರು.