ಹೋಂ ಡಾಕ್ಟರ್ ಫೌಂಡೇಶನ್ : ಸೇವಾ ಕಾರ್ಯದೊಂದಿಗೆ ಕ್ರಿಸ್ಮಸ್ ಆಚರಣೆ.
Posted On:
29-12-2020 11:01AM
ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಸೇವಾ ಕಾಯ೯ಗಳ ಮೂಲಕ ಮಾದರಿ ಕ್ರಿಸ್ಮಸ್ ಆಚರಣೆ ಮಣಿಪಾಲದ ವಿಜಯನಗರ ಸ್ಲಂ ಬಡಾವಣೆಯಲ್ಲಿ ಡಿ.27ರಂದು ಆದಿತ್ಯವಾರ ನಡೆಯಿತು.
ಈ ಸಂದರ್ಭದಲ್ಲಿ ಬಡ ವಿಧವೆ ಮಹಿಳೆ ಕುಕ್ಕಿಹಳ್ಳಿಯ ಸುಜಾತ ಕುಟುಂಬಕ್ಕೆ ಮೂವತ್ತು ಸಾವಿರ ರೂಪಾಯಿ, ಉದರ ಸಂಬಂದಿ ವ್ಯಾಧಿಯಿಂದ ಬಳಲುತ್ತಿರುವ ಹೂಡೆಯ ಉಲ್ಲಾಸ್ ಅರುಣ್ ರವರಿಗೆ ಹದಿನೆಂಟು ಸಾವಿರ ರೂಪಾಯಿ, ಕ್ಯಾನ್ಸರ್ ಪೀಡಿತ ಮಗು ತ್ರಿಷಾ ಚಿಕಿತ್ಸೆಗೆ ಇಪ್ಪತ್ತು ಸಾವಿರ ರೂಪಾಯಿ ಕುಕ್ಕಿಹಳ್ಳಿಯ ಬಡ ವೃದ್ಧ ದಂಪತಿವಿಶಾಲಾಕ್ಷಿರವರಿಗೆ ಔಷದಕ್ಕಾಗಿ ಆರು ಸಾವಿರ ರೂಪಾಯಿ,ಸ್ಪಂದನ ಉಪ್ಪುರು ಮಾನಸಿಕ ವಿಕಲ ಚೇತನ ರಿಗೆ ಏಳು ಸಾವಿರ ರೂಪಾಯಿ,ಬೆಳ್ಳಂಪಳ್ಳಿಯ ಸುಜಾತ ಕುಟುಂಬಕ್ಕೆ ಸೇವ್ ಲೈಫ್ ವತಿಯಿಂದ 60 ಸಾವಿರ ರೂಪಾಯಿ ನೆರವು ನೀಡಲಾಯಿತು.
ಈ ಕಾಯ೯ಕ್ರಮದಲ್ಲಿ ಸೇವ್ ಲೈಫ್ ಫೌಂಡೇಶನ್ ನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ರವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಆದಾಯ ತೆರಿಗೆ ನಿವೃತ್ತ ಅಧಿಕಾರಿ ಕರುಣಾಕರ, ಡಾII ಶಶಿಕಿರಣ್ ಶೆಟ್ಟಿ, ಡಾII ಸುಮಾ ಶೆಟ್ಟಿ, ಬಂಗಾರಪ್ಪ, ರಾಘವೇಂದ್ರ ಪೂಜಾರಿ, ಸ್ಪಂದನ ವಿಶೇಷ ಶಾಲೆಯ ಪ್ರಮುಖ ಜನಾಧ೯ನ್ ಮುಂತಾದವರಿದ್ದರು.
ಸಭಾ ಕಾಯ೯ಕ್ರಮದ ಬಳಿಕ ಸ್ಪಂದನ ವಿಶೇಷ ಶಾಲೆಯ ನಿವಾಸಿಗಳಿಂದ ಅದೇ ರೀತಿ ಸ್ಲo ನಿವಾಸಿ ಮಕ್ಕಳಿಂದ ವಿವಿಧ ವಿನೋದಾವಳಿ ಕಾಯ೯ಕ್ರಮ ನಡೆಯಿತು. ಡಾII ಶಶಿಕಿರಣ್ ಶೆಟ್ಟಿ ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.