ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕೋಟಿಚೆನ್ನಯರ ಜೀವನಗಾಥೆಯ ಪ್ರಬಂಧ ಸ್ಪರ್ಧೆ

Posted On: 03-01-2021 02:22PM

ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಬೈದಶ್ರೀ ಆದಿಉಡುಪಿ, ಉಡುಪಿ ಸಂಸ್ಥೆಯಿಂದ 10 ವರ್ಷ ಮೇಲ್ಪಟ್ಟು 20 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಕೋಟಿಚೆನ್ನಯರ ಜೀವನಗಾಥೆಯ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುತ್ತಾರೆ.

ಸ್ವಂತ ರಚನೆಯಾಗಿ, A4 ಸೈಜಿನ 6 ಪುಟಕ್ಕೆ ಮೀರದ ಕೈಬರಹ ಅಥವಾ ಟೈಪ್ ಮಾಡಿದ ಪ್ರಬಂಧವನ್ನು ಇಮೇಲ್ ಅಥವಾ ಸಂಸ್ಥೆಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು. ಪ್ರಬಂಧ ಕಳುಹಿಸಲು ಜನವರಿ 15 ಕೊನೆಯ ದಿನವಾಗಿದೆ.

ಪ್ರಥಮ ಬಹುಮಾನ ₹ 3000 ಜೊತೆಗೆ ಗ್ರಂಥ ಪುಸ್ತಕ, ದ್ವಿತೀಯ ಬಹುಮಾನ ₹ 2000, ಗ್ರಂಥ ಪುಸ್ತಕ, ತೃತೀಯ ಬಹುಮಾನ ₹ 1000, ಗ್ರಂಥ ಪುಸ್ತಕ ಮತ್ತು ಭಾಗವಹಿಸಿದ ಎಲ್ಲರಿಗೂ ಗೌರವ ಸ್ಮರಣಿಕೆ ಯಾಗಿ ಗ್ರಂಥ ಪುಸ್ತಕ ನೀಡಲಾಗುವುದು.

ಬೈದಶ್ರೀ ಆದಿ ಉಡುಪಿಯಲ್ಲಿ ಜನವರಿ 26 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.