ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪುತ್ತಿಗೆ ಮೂಲ ಮಠದ ಸ್ವರ್ಣ ನದಿ ತೀರದಲ್ಲಿ ಸ್ವಣಾ೯ರತಿ

Posted On: 03-01-2021 02:28PM

ಸ್ವಣಾ೯ರಾಧನಾ ವತಿಯಿಂದ ಪುತ್ತಿಗೆ ಮೂಲ ಮಠದ ಸ್ವಣ೯ ನದಿಯ ತೀರದಲ್ಲಿ ಸ್ವಣಾ೯ರತಿ ಕಾಯ೯ಕ್ರಮ ಜ.1 ರಂದು ಶುಕ್ರವಾರ ನಡೆಯಿತು.

ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀoದ್ರ ತೀಥ೯ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಗಿಡಗಳನ್ನು ನೆಟ್ಟರೆ ಸಾಲದು ಅದನ್ನು ಉಳಿಸಿ ಬೆಳೆಸಬೇಕು. ನದಿ ತೀರಗಳಲ್ಲಿ ತ್ಯಾಜ್ಯಗಳನ್ನು ಹಾಕುದನ್ನು ನಿಲ್ಲಿಸಿದಾಗ ಮಾತ್ರ ನದಿಗಳು ಪರಿಶುದ್ಧವಾಗಿ ಹರಿಯಲು ಸಾಧ್ಯ.ಈ ನಿಟ್ಟಿನಲ್ಲಿ ಪರಿಸರ ಮತ್ತು ನದಿಗಳನ್ನು ಉಳಿಸುವ ಸಂಕಲ್ಪ ಮಾಡಬೇಕೆಂದರು.

ಕಾಪು ಶಾಸಕ ಲಾಲಾಜಿ ಮೆಂಡನ್ ಶುಭ ಹಾರೈಸಿದರು.ಈ ಸಂದಭ೯ದಲ್ಲಿ ಸ್ವರಣಾರಾಧನಾ ಅಭಿಯಾನದ ಪ್ರಾಯೋಜಕರಾದ ಡಾ. ನಾರಾಯಣ ಶೆಣೈ, ಸ್ವರ್ಣಾರತಿಯ ಆಯೋಜಕರಾದ, ಪ್ರಭಾಕರ ಭಟ್, ರಾಘವೇಂದ್ರ ಪ್ರಭು,ಕವಾ೯ಲು ,ಪರ್ಕಳ ಶ್ರೀ ದುರ್ಗಾ ಸಂಕೀರ್ತನ ಭಜನಾ ಮಂಡಳಿಯ ಕೆ ಚಂದ್ರಶೇಖರ ಪ್ರಭು ,ಗಣೇಶ ಪೈ, ಕಾಪು ಭಾಜಪಾ ಮಹಿಳಾ ಮೊರ್ಚಾದ ನೀತಾ ಪ್ರಭು, ಮಾಜಿ ನಗರಸಭಾ ಸದಸ್ಯ ಶ್ಯಾಮಪ್ರಸಾದ ಕುಡ್ವ, ಪರ್ಯಾವರಣ ಗತಿವಿಧಿಯ ಉಡುಪಿ ನಗರ ಕಾರ್ಯವಾಹ ಗಣೇಶ್ ಶೆಣೈ ಬೈಲೂರು, ವೀಣಾ ಶ್ರೀ ಪುತ್ತಿಗೆ ವಿದ್ಯಾಪೀಠದ ಮೆನೆಜರ್ ಹರಿಪ್ರಸಾದ ಆಚಾರ್ಯ , ರೇಡಿಯೋತಜ್ಙ ಶಾಮ್ ಭಟ್ , ಅಶ್ವಿನ್ ಮಣಿಪಾಲ, ಗಿರೀಶ್ ಮುಂತಾದವರಿದ್ದರು.ವಿದುಷಿ ಪಾವನಾ ಆಚಾರ್, ಮೃದಂಗ ವಿದ್ವಾನ್ ಬಾಲಚಂದ್ರ ಆಚಾರ್ ರವರಿಂದ ನದಿ ತೀರದಲ್ಲಿ ವೀಣಾ ವಾದನ ಕಾಯ೯ಕ್ರಮ ನಡೆಯಿತು.