ಬಂಟಕಲ್ಲು : ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದಿಂದ ಸಿಸಿ ಟಿವಿ ಕೊಡುಗೆ ಹಾಗೂ ಪೊಲೀಸ್ ಜನ ಸಂಪರ್ಕ ಸಭೆ
Posted On:
06-01-2021 09:14PM
ಬಂಟಕಲ್ಲು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದವರು ಬಂಟಕಲ್ಲು ಆಸುಪಾಸು ನಡೆಯಬಹುದಾದ ಅಪರಾಧ ಕೃತ್ಯ, ಕಳ್ಳತನ , ದರೋಡೆಯಂತಹ ಅಪರಾಧಗಳ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಸಲುವಾಗಿ ಬಂಟಕಲ್ಲು ಪೇಟೆಯಲ್ಲಿ ಅಳವಡಿಸಿದ ಸಿ.ಸಿ ಕೆಮಾರ ವ್ಯವಸ್ಥೆಯನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀ ಶ್ರೀಶೈಲರವರು ಉದ್ಘಾಟಿಸಿದರು.
ತದನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಠಾಣಾಧಿಕಾರಿಯವರು ಇಲಾಖಾಮಾಹಿತಿಯನ್ನು ನೀಡಿ ರಸ್ತೆ ಸುರಕ್ಷತೆ, ಚಾಲನಾ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ತಿಳಿಸಿದರು. ಇದೇ ಸಂಧರ್ಭದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುಣಾವಣೆಯಲ್ಲಿ ವಿಜಯಶಾಲಿಯಾದ ಸಂಘದ ಸದಸ್ಯ ಶ್ರೀ ಸತೀಶ್ ರವರನ್ನು ಸಂಘದವತಿಯಿಂದ ಅಭಿನಂದಿಸಲಾಯಿತು.
ವೇದಿಕೆಯಲ್ಲಿದ್ದ ನಾಗರಿಕ ಸೇವಾ ಸಮಿತಿ (ರಿ) ಬಂಟಕಲ್ಲು ಇದರ ಅಧ್ಯಕ್ಷ ಶ್ರೀ ಕೆ. ಆರ್. ಪಾಟ್ಕರ್ ರವರು ರಿಕ್ಷಾ ಚಾಲಕ ಮಾಲಕರ ಸಂಘದವರು ನೀಡಿದ ಸಿ.ಸಿ ಕೆಮಾರ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.
ಬಂಟಕಲ್ಲು ಸಾರ್ವಜನಿಕ ಗಣೆಶೋತ್ಸವ ಸಮಿತಿ ಅಧ್ಯಕ್ಷ ಶ್ರೀ ಮಾಧವ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ ಸದಸ್ಯೆ ಶ್ರೀಮತಿ ವೈಲೆಟ್ ಕ್ಯಾಸ್ತಲಿನೊ, ಬಂಟಕಲ್ಲು ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಶ್ರೀ ಉಮೇಶ್ ರಾವ್ , ಶ್ರೀ ಉಮೇಶ್ ಪ್ರಭು, ಲಯನ್ಸ್ ಕ್ಲಬ್ ಉಡುಪಿ ಕರಾವಳಿ ಅಧ್ಯಕ್ಷ ಲ. ಅನಂತರಾಮ ವಾಗ್ಲೆ, ರವೀಂದ್ರ ಆಚಾರ್ಯ, ವಿನ್ಸಂಟ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ನವೀನ್ ಸನಿಲ್ ರವರು ಸ್ವಾಗತಿಸಿ, ಹರೀಶ್ ರವರು ಕಾರ್ಯಕ್ರಮ ನಿರೂಪಿಸಿದರು.
ಸಂಘದ ಶ್ರೀ ಗೋಪಾಲ ದೇವಾಡಿಗ ರವರು ವಂದಿಸಿದರು.