ಕಲ್ಲಟ್ಟೆ ಶ್ರೀ ಜಾರಂದಾಯ ಬಂಟ ದೈವದ ನೇಮೋತ್ಸವವು ಇದೇ ಬರುವ ಶನಿವಾರ 16ರಂದು ನಡೆಯಲಿದೆ.
ಬೆಳಿಗ್ಗೆ 9ಕ್ಕೆ ಕಲ್ಲಟ್ಟೆ ಗುತ್ತು ಮೂಲ ಕುಟುಂಬಸ್ಥರಿಂದ ಕಲ್ಲಟ್ಟೆಗುತ್ತು ನಾಗಬನದಲ್ಲಿ ಆಶ್ಲೇಷಾ ಬಲಿ ಸೇವೆ,10:30 ಕ್ಕೆ ಚಪ್ಪರ ಮುಹೂರ್ತ, ಮಧ್ಯಾಹ್ನ 12 ಗಂಟೆಗೆ ಕಲ್ಲಟ್ಟೆ ಶ್ರೀ ಜಾರಂದಾಯ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸಂಜೆ 6ಕ್ಕೆ ಭಂಡಾರ ಇಳಿಯುವುದು, 10 ರಿಂದ ನೇಮೋತ್ಸವ, ರಾತ್ರಿ ಗಂಟೆ 2ರಿಂದ ಶ್ರೀ ಜಾರಂದಾಯ ಬಂಟ ದೈವ ಮತ್ತು ಸಂತೆಕಟ್ಟೆ ಶ್ರೀ ಕೋರ್ದಬ್ಬು ದೈವಗಳ ಭೇಟಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.