ಕಾಪು ತಾಲೂಕಿನ ಪಲಿಮಾರು ಪಂಚಾಯತ್ ವ್ಯಾಪ್ತಿಯ ಅವರಾಲು, ಅಡ್ಕ ನಾಗ ಬ್ರಹ್ಮಲಿಂಗೇಶ್ವರ ಬ್ರಹ್ಮಸ್ಥಾನದ ಅಶ್ವತ್ಥ ಕಟ್ಟೆಯಲ್ಲಿ ಇದೇ ಬರುವ ಗುರುವಾರದಂದು 10ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಶನಿ ಪೂಜೆಯು ನಡೆಯಲಿದೆ.
ಬೆಳಿಗ್ಗೆ ಗಂಟೆ 8:30ಕ್ಕೆ ಶಿವಪ್ರಸಾದ್ ಭಜನಾ ಮಂಡಳಿಯವರಿಂದ ಭಜನೆ, 9ಕ್ಕೆ ಸತ್ಯನಾರಾಯಣ ಪೂಜೆ ಪ್ರಾರಂಭ, 12ಕ್ಕೆ ಪಾಂಡುರಂಗ ಭಜನಾ ಮಂಡಳಿ ಮಟ್ಟುಪಟ್ಣ ಹೆಜಮಾಡಿ ಇವರಿಂದ ಭಜನೆ, 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 3ರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ಪ್ರಾರಂಭವಾಗಲಿದ್ದು, ರಾತ್ರಿ 8ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.