ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ವೇದಮೂರ್ತಿ ಶ್ರೀ ನಾಗರಾಜ ಭಟ್ ಕಲ್ಯಾಲು ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಮಂಗಲೋತ್ಸವ ಇಂದು (ಬುಧವಾರ) 92 ಹೇರೂರು, ಬಂಟಕಲ್ಲು ಇಲ್ಲಿ ನಡೆಯಲಿದೆ.
ಬೆಳಿಗ್ಗೆ 6:30ರಿಂದ ರಾಘವೇಂದ್ರ ಸುಪ್ರಭಾತ, 8ಕ್ಕೆ ವೃಂದಾವನ ಪ್ರಭಾವಳಿ ಸಮರ್ಪಣೆ, 10ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 12:30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 4ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಭಜನಾ ಮಂಗಲ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
92 ಹೇರೂರು ಗ್ರಾಮದ ಅಡ್ವೆಗುತ್ತು ಮನೆತನದ ದಿ| ಮೆಣ್ಪ ಪ್ರಭುರವರ ಪುತ್ರ ಶ್ರೀನಿವಾಸ ಪ್ರಭು, ಪತ್ನಿ ಮತ್ತು ಮಕ್ಕಳು ಶ್ರೀ ರಾಘವೇಂದ್ರ ಸ್ವಾಮಿಗಳ ಪೀಠಕ್ಕೆ ಪಂಚಲೋಹದ ವೃಂದಾವನ ಪ್ರಭಾವಳಿಯನ್ನು ಸೇವೆಯ ರೂಪದಲ್ಲಿ ಮಂಗಳವಾರ ಸಲ್ಲಿಸಿದರು.