ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಂಗಳೂರಿನ ಈ ಅಜಾನುಬಾಹು ಪೊಲೀಸ್ ನ ಕೆಲಸ ನೋಡಿದ್ರೆ ನೀವು ದಂಗಾಗೋದು ಗ್ಯಾರಂಟಿ..ಅವರೇ ವಿಜಯ ಕಾಂಚನ್ ಬೈಕಂಪಾಡಿ

Posted On: 13-01-2021 12:07PM

ತುಂಬಾ ಸಮಯದಿಂದ ಇವರ ಬಗ್ಗೆ ಬರೆಯಬೇಕು ಎಂದುಕೊಂಡಿದ್ದೆ, ಆದರೆ ಕಾಲವೇ ಕೂಡಿಬಂದಿರಲಿಲ್ಲ.. ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ಇಷ್ಟೊಂದು ಸಾಧನೆ ಮಾಡಲು ಸಾಧ್ಯವೇ..? ಅದು ಕೂಡ ಯುವಕರನ್ನು ನಾಚಿಸುವಂತ ಸಾಧನೆ. ನಾನು ಇವರನ್ನು ತುಂಬಾ ಹತ್ತಿರದಿಂದ ಬಲ್ಲೆ. ಮಂಗಳೂರಿನಲ್ಲಿದ್ದಾಗ ವಾರಕ್ಕೆ ಮೂರು ನಾಲ್ಕು ಸಲ ಭೇಟಿಯಾಗುತ್ತಿದ್ದೆವು, ಆದರೆ ಇತ್ತೀಚೆಗೆ ಕೊರೊನದಿಂದಾಗಿ ಇವರ ಭೇಟಿ ಬಹಳ ಕಡಿಮೆಯಾಗಿತ್ತು. ಮೊನ್ನೆ ಕುದ್ರೋಳಿಯಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಇವರು ಬೆಳ್ಳಿ ಪದಕ ಪಡೆದ ತುಣುಕೊಂದು ನಮ್ಮ ವಾಟ್ಸಪ್ ಗ್ರೂಪ್ ಗೆ ಬಂದಿತ್ತು. ಯುವಕರು ಭಾಗವಹಿಸುವ ಸ್ಪರ್ಧೆಯಲ್ಲಿ 52 ವರ್ಷದವರು ಪೈಪೋಟಿ ಕೊಡಲು ಸಾಧ್ಯವೇ..?

ಅದಕ್ಕೆ ಹೇಳಿದ್ದು ಹಿರಿಯರು ಸಾಧನೆಗೆ ಯಾವುದೇ ಪ್ರಾಯ ಅಡ್ಡಿ ಬರುವುದಿಲ್ಲ ಎಂದು. ಅವರ ಮನೆಗೆಲ್ಲ ಭೇಟಿಕೊಟ್ಟಾಗ ಫಲಕಗಳನ್ನು ನೋಡುವುದೇ ಒಂದು ಖುಷಿ. ನಾನು ಇಷ್ಟೆಲ್ಲಾ ಹೇಳಿದ್ದು ಯಾರ ಬಗ್ಗೆ ಅಂದುಕೊಂಡಿರಾ... ಮಂಗಳೂರು ಪೊಲೀಸ್ ಇಲಾಖೆಯಲ್ಲಿ ಅಜಾತಶತ್ರು, ಸ್ನೇಹಜೀವಿ, ಪೊಲೀಸ್ ಇಲಾಖೆಯಲ್ಲಿ ದೊಡ್ಡಗಾತ್ರದ ಅಜಾನುಬಾಹು. ಅದುವೇ ನಮ್ಮ ಪ್ರೀತಿಯ ವಿಜಯ ಕಾಂಚನ್ ಬೈಕಂಪಾಡಿ (ಇವರ ಗುರುಗಳು ಬಾಲಾಂಜನೇಯ ವ್ಯಾಯಾಮ ಶಾಲೆ ಮಂಗಳೂರು, ಏಕಲವ್ಯ ಪ್ರಶಸ್ತಿ ವಿಜೇತ ' ಸತೀಶ್ ಕುದ್ರೋಳಿ.) ಬನ್ನಿ ಇವರ ಸಾಧನೆಯ ವಿವರಗಳನ್ನು ತಿಳಿಸುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 6 -ಸಲ ಭಾಗವಹಿಸಿದ್ದಾರೆ. 1.ಜಪಾನ್ ನಲ್ಲಿ -ಬೆಳ್ಳಿ ಪದಕ 2.ಫಿಲಿಪೈನ್ಸ್ ನಲ್ಲಿ -ಕಂಚಿನ ಪದಕ 3.ರಷ್ಯಾದಲ್ಲಿ -ಬೆಳ್ಳಿ ಪದಕ 4.ದುಬೈ ಯಲ್ಲಿ - ಬೆಳ್ಳಿ ಪದಕ 5.ಅಮೇರಿಕಾದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ ಸಿಪ್ ನಲ್ಲಿ -2 ಚಿನ್ನದ ಪದಕ 6.ಭಾರತದಲ್ಲಿ- ಚಿನ್ನದ ಪದಕ (ಬೆಸ್ಟ್ ಲಿಫ್ಟರ್ ) ರಾಷ್ಟ್ರೀಯ ಮಟ್ಟದಲ್ಲಿ- 8.ಬಾರಿ ಭಾಗವಹಿಸಿದ್ದಾರೆ ಅದರಲ್ಲಿ ಭಾರತದ ಬಲಿಷ್ಠ ಕ್ರೀಡಾಪಟು - 2 ಸಲ. (STRONG MAN OF INDIA ) ಪೊಲೀಸ್ ಇಲಾಖೆಯಲ್ಲಿ ಅನೇಕ ಕೇಸ್ ನಲ್ಲಿ ಅಪರಾಧಿಗಳನ್ನು ಬಂಧಿಸಿ, ಕಂಬಿ ಎನಿಸುವ ಹಾಗೆ ಮಾಡಿದ್ದರಿಂದ ಅವರಿಗೆ 2012 ರಲ್ಲಿ ಮುಖ್ಯಮಂತ್ರಿಯಿಂದ ಚಿನ್ನದ ಪದಕ ಕೂಡ ಸಿಕ್ಕಿದೆ .

ಹಾಗೆಯೇ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಮತ್ತು ಏಕಲವ್ಯ ಪ್ರಶಸ್ತಿ ವಿಜೇತೆ 'ಬೋಳ ಅಕ್ಷತಾ ಪೂಜಾರಿ ' ಇವರು ವಿಜಯ್ ಕಾಂಚನ್ ಇವರ ಶಿಷ್ಯೆಯಾಗಿದ್ದಾರೆ. ಹಾಗೂ ಅನೇಕ ಮಂದಿಯನ್ನು ಕಿನ್ನಿಗೋಳಿಯಲ್ಲಿರುವ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ತರಬೇತಿ ಕೊಟ್ಟು ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವರುಷಗಳ ಹಿಂದೆ ಕುದ್ರೋಳಿ ದಸರಾದ ಸಂದರ್ಭದಲ್ಲಿ ಬಾಹುಬಲಿಯ ವೇಷ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ನೀವೇನಾದರೂ ಇವರಿಗೆ ಶುಭಾಶಯಗಳು ಹೇಳಬೇಕೆಂದರೆ ಪಾಂಡೇಶ್ವರದಲ್ಲಿರುವ ಎಕೊನಾಮಿಕ್ ಅಂಡ್ ನಾರ್ಕೋಟಿಕ್ಸ್ ಕ್ರೈಂ ಸ್ಟೇಷನ್ ನಲ್ಲಿ ASI ಕರ್ತವ್ಯ ನಿರ್ವಹಿಸುತ್ತಾ ಇದ್ದಾರೆ. ಲೇಖನ : ವಿಶು