ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಬಿ.ಎಸ್ಸಿ ಪದವಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದ ಬಂಟಕಲ್ಲು ಮಾಣಿಪಾಡಿ ಶ್ರೀ ರಮೇಶ ಮೂಲ್ಯ ಮತ್ತು ಶ್ರೀಮತಿ ಗೀತಾ ಮೂಲ್ಯರವರ ಪುತ್ರಿ ಕುಮಾರಿ ರಶ್ಮಿತರವರಿಗೆ ಬಂಟಕಲ್ಲು ನಾಗರಿಕ ಸೇವಾ ಸಮಿತಿ (ರಿ.)ರವರು ಅವರ ಮನೆಗೆ ತೆರಳಿ ಅಭಿನಂದನೆ ತಿಳಿಸಿದರು.
ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್
ಪಾಟ್ಕರ್ ರವರು ರಶ್ಮಿತಾರನ್ನು ಸಮಿತಿ ಪರವಾಗಿ ಅಭಿನಂದಿಸಿದರು. ಇವರ ಸಾಧನೆ ನಮ್ಮ ಊರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿ ಅವರ ಭವಿಷ್ಯದ ಜೀವನಕ್ಕೆ ಶುಭ ಹಾರೈಸಿದರು.
ಮಂಗಳೂರಿನ ಎ.ಜೆ ವೈದ್ಯಕೀಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದ ರಶ್ಮಿತಾ ಶ್ವಾಸಕೋಶದ ಚಿಕಿತ್ಸೆ ( ರೆಸ್ಪಿರೇಟರಿ ಥೆರಫಿಸ್ಟ್) ಬಗ್ಗೆ ವಿಶೇಷ ಅಧ್ಯಯನ ಮಾಡಿ ಚಿನ್ನದ ಪದಕ ಗಳಿಸಿದ್ದರು.
ನಾಗರೀಕ ಸೇವಾ ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ, ಶಿರ್ವ ಗ್ರಾ.ಪಂ ಸದಸ್ಯರಾದ ಸತೀಶ್ ಬಂಟಕಲ್ಲು, ಶ್ರೀಮತಿ ವೈಲೆಟ್ ಕ್ಯಸ್ತಲಿನೊ, ಸಮಿತಿಯ ಅನಂತರಾಮ ವಾಗ್ಲೆ, ರವೀಂದ್ರ ಆಚಾರ್ಯ, ರಾಘವೇಂದ್ರ, ರಶ್ಮಿತರ ತಾಯಿ ಶ್ರೀಮತಿ ಗೀತಾ ಮೂಲ್ಯ , ಶಾಂತ ಕುಲಾಲ್, ಆಶಾ ರಾವ್ ಗಂಗಾಧರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.