ಸುಳ್ಯ ತಾಲೂಕು ಪಂಚಾಯತಿಯಲ್ಲಿ ಜಲಜೀವನ್ ಮಿಷನ್ ಕಾರ್ಯಾಗಾರ
Posted On:
14-01-2021 08:44PM
ದ.ಕ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ,ಸ್ವಚ್ಛ ಭಾರತ್ ಮಿಷನ್ ಮತ್ತು ತಾಲೂಕು ಪಂಚಾಯತ್ ಸುಳ್ಯ ಇದರ ಸಹಭಾಗಿತ್ವದಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಬೆಂಬಲಿತ ಸಂಸ್ಥೆ ಸಮುದಾಯ ತುಮಕೂರು (ರಿ.) ಇದರ ವತಿಯಿಂದ ಸುಳ್ಯ ತಾಲೂಕು ಪಂಚಾಯತಿಯ ಪಯಸ್ವಿನಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಲಜೀವನ್ ಮಿಷನ್ ಕಾರ್ಯಾನುಷ್ಠಾನದ ಕುರಿತು ಕಾರ್ಯಾಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಪಂಚಾಯತ್ ಲೆಕ್ಕಾಧಿಕಾರಿ ಹರೀಶ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಜೆಜೆಎಮ್ ಇದರ ಜಿಲ್ಲಾ ಐಇಸಿ ಮತ್ತು ಹೆಚ್.ಆರ್.ಡಿ ವಿಭಾಗದ ಮುಖ್ಯಸ್ಥ ಶಿವರಾಮ್ ಪಿ.ಬಿ ಮತ್ತು ಇಂಜಿನಿಯರ್ ಅಶ್ವಿನ್ ಕುಮಾರ್ ಅವರು ಕಾರ್ಯಚಟುಚಟಿಕೆ ಹಾಗೂ ತಾಂತ್ರಿಕ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ಗ್ರಾಮ ಪಂಚಾಯತುಗಳ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು. ಸ್ವಚ್ಛ ಭಾರತ್ ಮಿಷನ್ ಇದರ ಪವನ್ ಸಹಕರಿಸಿದರು. ಜೆಜೆಎಮ್ ಐಇಸಿ ದಯಾನಂದ ಮಯ್ಯಾಳ, ಮಹಾಂತೇಶ್ ಹಿರೇಮಠ್ ಕಾರ್ಯಕ್ರಮ ಆಯೋಜಸಿದ್ದರು.