ಸ್ವಚ್ಛ ಭಾರತ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಬಾಸ್ಕಿ ಅರ್ಬ್ ಗ್ರೂಪ್ ನೇತೃತ್ವದ 90ನೇ ದಿನದತ್ತ ಸ್ವಚ್ಛತಾ ಕಾರ್ಯ
Posted On:
16-01-2021 04:53PM
ಸ್ವಚ್ಛ ಭಾರತ ಸ್ವಚ್ಛ ಮಂಗಳೂರು ಅಭಿಯಾನದ ಪರಿಕಲ್ಪನೆಯಲ್ಲಿ ಇಷ್ಟರವರೆಗೇ 89 ದಿನಗಳ ಸ್ವಯಂ ಪ್ರೇರಿತ ಸ್ವಚ್ಛತೆ ಮಾಡಿ ಇದೇ ಬರುವ ತಾರೀಕು 17/01/2021ನೇ ದಿನದಂದು 90ನೇ ದಿನದತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಸಂಸ್ಥೆ ಬಾಸ್ಕಿ ಅರ್ಬ್ ಗ್ರೂಪ್.
ಯಾವುದೇ ಪ್ರಚಾರವನ್ನೂ ಬಯಸದ ಬಾಸ್ಕಿ ಅರ್ಬ್ ಗ್ರೂಪ್'ನ ಶ್ರೇಯಸ್ ಹೊಳ್ಳ, ಹರ್ಷ ಕೋಟ್ಯಾನ್, ಹಾಗೂ ಕು। ಮನೀಷ ಮತ್ತು ಪ್ರಥಮದಲ್ಲಿ ಜೊತೆಗೆ ಸಹಕರಿಸಿದ ಸಂಕೇತ್ ಬೆಂಗ್ರೆ ಹಾಗೂ ಶಿಲ್ಪ ಬೆಂಗ್ರೆ ಇವರುಗಳ ಮುಂದಾಳತ್ವದಲ್ಲಿ ನಡೆಯುತ್ತಿದೆ.
ಮಂಗಳೂರಿನ ಸಮೀಪದ ತೋಟ ಬೆಂಗ್ರೆ ಗ್ರಾಮದ ಯುವಕ ಯುವತಿಯರು ಹಾಗೂ ಮಕ್ಕಳನ್ನು ಒಗ್ಗೂಡಿಸಿ, ಪ್ರತಿನಿತ್ಯ ತೋಟ ಬೆಂಗ್ರೆ ಬೀಚ್ ನಲ್ಲಿ ದಿನಾಲು ಗಾಳಿ-ಬಿಸಿಲನ್ನು ಲೆಕ್ಕಿಸದೆ, ತಮ್ಮ ಸ್ವಂತ ಖರ್ಚಿನಲ್ಲಿ ತೋಟ ಬೆಂಗ್ರೆ ಬೀಚ್ ಬದಿ ಹಾಗೂ ನದಿ ಬದಿಯಲ್ಲಿ ಕಸ ಕಡ್ಡಿಗಳನ್ನು ಸತತವಾಗಿ ಸ್ವಚ್ಛ ಮಾಡುತ್ತಿದ್ದಾರೆ.
ಇವರ ಈ ನಿಸ್ವಾರ್ಥ ಸೇವೆಯನ್ನು ಸರಕಾರ ಹಾಗೂ ಜಿಲ್ಲಾಡಳಿತ ಗುರುತಿಸುವಂತಾಗಬೇಕಿದೆ.