ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ತಾಲೂಕು ಗ್ರಾಮ ಪಂಚಾಯತ್ ಗಳ ಅಧ್ಯಕ್ಷ -ಉಪಾಧ್ಯಕ್ಷ ಮೀಸಲಾತಿಗಳ ಆಯ್ಕೆ ಪ್ರಕಟ

Posted On: 21-01-2021 04:25PM

ಕಾಪು ತಾಲೂಕಿನ 2020ನೇ ಸಾಲಿನ ಚುನಾವಣೆ ಮುಗಿದ 16 ಗ್ರಾಮಪಂಚಾಯತ್ ಗಳ 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಇಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ತಾಲೂಕಿನ ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಇಂದು ಉಚ್ಚಿಲ ಮಹಾಲಕ್ಷ್ಮಿ ಸಭಾ ಭವನದಲ್ಲಿ ನಡೆಯಿತು.

ಬೆಳ್ಳೆ : ಅಧ್ಯಕ್ಷ- ಹಿಂದುಳಿದ ವರ್ಗ ಅ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಕುರ್ಕಾಲು: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ. ಶಿರ್ವ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಇನ್ನಂಜೆ: ಅಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಕಟಪಾಡಿ: ಅಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಕೋಟೆ: ಅಧ್ಯಕ್ಷ -ಹಿಂದುಳಿದ ವರ್ಗ ಅ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ‌. ಮಜೂರು :ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ. ಕುತ್ಯಾರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಮುದರಂಗಡಿ: ಅಧ್ಯಕ್ಷ- ಹಿಂದುಳಿದ ವರ್ಗ ಬ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ. ಬೆಳಪು: ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ. ಬಡಾ: ಅಧ್ಯಕ್ಷ -ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ‌. ಎಲ್ಲೂರು: ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ- ಅನುಸೂಚಿತ ಜಾತಿ ಮಹಿಳೆ. ಪಲಿಮಾರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಬ ಮಹಿಳೆ. ತೆಂಕ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ. ಪಡುಬಿದ್ರಿ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಹೆಜಮಾಡಿ: ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ.

ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಅಧಿಕಾರಿಗಳನ್ನು ನೇಮಿಸಿ ಏಳು ದಿನ ಮುಂಚಿತವಾಗಿ ಗ್ರಾಮ ಪಂಚಾಯತಿಗಳಿಗೆ ನೋಟಿಸ್ ನೀಡಲಾಗುವುದು. 15 ದಿನಗಳ ಒಳಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧಕ್ಷರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಈ ಸಂದರ್ಭ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.