ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಹಾಗೂ ವಿಜಯ ಪೇಪರ್ಸ್ ಉಡುಪಿ ಜಂಟಿ ಯಾಗಿ ಗಣರಾಜ್ಯೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಅನಾರೋಗ್ಯದಲ್ಲಿ ದಾಖಲಾಗಿರುವವರಿಗೆ ಹಾಗೂ ಉಪ್ಪುರು ಸ್ಪಂದನ ದ ವಿಶೇಷ ಮಕ್ಕಳಿಗೆ ಹಣ್ಣು ಹಂಪಲು ವಿತರಣ ಕಾರ್ಯಕ್ರಮ ನಡೆಸಲಾಯಿತು.
ಜಿಲ್ಲಾಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ, ವಿಜಯ ಪೇಪರ್ಸ್ ಮಾಲಕರಾದ ಮಹೇಶ್ ಶೆಣೈ, ಮಾಜಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಸಮಿತಿ ಸದಸ್ಯರಾದ ಶಿವರಾಮ್ ಆಚಾರ್ಯ, ರಮೇಶ್ ಕುಂದರ್, ಸದಸ್ಯರಾದ ಶಿವಪ್ರಸಾದ್ ಉಪಸ್ಥಿತರಿದ್ದರು.