ಶಿಕ್ಷಣದ ಪ್ರಮುಖ ಉದ್ದೇಶವು ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಬೆಳೆಸುವುದಾಗಿದೆ. ಯುವಜನತೆಯು ಸಮಾಜದ ಏಳಿಗೆಗೆ ಸದಾ ಶ್ರಮಿಸಬೇಕು. ಭಾರತದ ಉನ್ನತ ಪರಂಪರೆಯನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದು. ಜನರ ತೆರಿಗೆ ಹಣದ ಸದ್ವಿನಿಯೋಗವಾಗಬೇಕು. ದೇಶದ ಸೈನಿಕರ ತ್ಯಾಗ ,ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಮಂಗಳೂರಿನ ನೀರು ಸರಬರಾಜು ಯೋಜನೆಯ ಡಿಸೈನ್ ಇಂಜಿನಿಯರ್ ಪ್ರಕಾಶ್ ಕಿಣಿ ಕುತ್ಯಾರು ಹೇಳಿದರು.
ಅವರು ಕುತ್ಯಾರಿನ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸಂಸ್ಥೆಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ವಾನ್ ಶಂಭುದಾಸ್ ಗುರೂಜಿ ವಹಿಸಿ ಶುಭ ಹಾರೈಸಿದರು . ಸಂಸ್ಥೆಯ ಪ್ರಾಂಶುಪಾಲ ಗುರುದತ್ತ ಸೋಮಯಾಜಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರುತಿ ರಾವ್ ಪರಿಚಯಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿ, ನಾಗರಾಜ್ ವಂದಿಸಿದರು.